ಬೆಂಗಳೂರು: ಫೇಕ್ ನ್ಯೂಸ್ ಹರಡುವುದರಲ್ಲಿ ಕೆಲವರು ನಿರತರಾಗಿದ್ದಾರೆ ಅದು ರಾಜಕೀಯ ಇರಬಹುದು ಅಥವಾ ಸಮಾಜದ ಶಾಂತಿ ಕದಡುವ ವಿಚಾರ ಇರಬಹುದು ಇಂತಹ ಸುಳ್ಳು ಸುದ್ದಿಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದನ್ನು ಗಮನಿಸಿದ್ದೇವೆ ಇದಕ್ಕೆಲ್ಲಾ ಒಂದು ಕಡಿವಾಣ ಹಾಕಲು ತಂಡ ರಚನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಂಬಂಧವೇ ಇಲ್ಲದ ಪೋಟೋಗಳನ್ನು ಹಾಕಿ ಸಂಬಂಧ ಕಲ್ಪಿಸುವುದು ನಡೆಯುತ್ತಿದ್ದು ಸರ್ಕಾರ ರಚನೆ ಆದಮೇಲೆ ಫೇಕ್ ನ್ಯೂಸ್ ಗಮನಿಸಿದ್ದೇವೆಇದನ್ನು ನಿಲ್ಲಿಸದಿದ್ದರೆ ಬಹಳಷ್ಟು ಸಮಸ್ಯೆ ಆಗಲಿದೆ ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ
ಸೈಬರ್ ಲಾನಲ್ಲಿ ದಿನಾ ಅಮೆಂಡ್ಮೆಂಟ್ ಮಾಡಬೇಕಾಗುತ್ತದೆ ಹಾಗೆ ಆರ್ಟಿಫಿಸಲ್ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಆಮೇಲೆ ಸುಳ್ಳು ಸುದ್ದಿ ಹರಡುವವರ ಮೇಲೆ ಶಿಕ್ಷೆಗೆ ಸೂಕ್ತ ಕಾನೂನು ಕೂಡ ತರುತ್ತೇವೆ ಎಂದು ಹೇಳಿದರು.
ಬಿಟ್ ಕಾಯಿನ ವಿಚಾರ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತೇವೆ. ಈ ಹಿಂದಿನ ಸರ್ಕಾರ ಮುಕ್ತಾಯಗೊಳಿಸಿದೆ ಆದರೆ ನಾವು ಮರು ತನಿಖೆ ಮಾಡುತ್ತೇವೆ.
ಆ ನಂತರ ಸಿಐಡಿಗೆ ಕೊಡಬೇಕ ಅಥವಾ ಬೇರೆ ತನಿಖಾ ಸಂಸ್ಥೆಗೆ ಕೊಡಬೇಕಾ ಎಂದು ನಿರ್ಧರಿಸುತ್ತೇವೆ ಆ ನಂತರ ಬೇರೆ ಬೇರೆ ಏಜೆನ್ಸಿಗಳ ಸಹಕಾರವನ್ನು ಸಿಐಡಿಗೆ ಕೊಡಿಸಲಾಗುವುದು. ಆ ನಂತರ ಯಾವ್ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆಯೋ ಅದರ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಹಾಗೆ ಇದೇ ಮಾತನ್ನ ಸಿಎಂ ಕೂಡ ಹೇಳಿದ್ದಾರೆ