ಹುಬ್ಬಳ್ಳಿ: ನಮ್ಮ ಸರ್ಕಾರ ರಾಜಕೀಯ ಕಾರಣಕ್ಕಾಗಿ ಯಾವುದೇ ಆಶ್ವಾಸನೆ ಕೊಡುವುದಿಲ್ಲ ಎಂದು ಕೇವಲ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ವಂದೇ ಮಾತರಂ ರೈಲ್ವೆಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ವಂದೇ ಭಾರತ ರೈಲು ಉದ್ಘಾಟೆನೆ ಇಂದು ಅಧಿಕೃತವಾಗಿ ಆಗಿದ್ದು ನಾವು ಕೆಲಸ ಮಾಡಿ ತೋರಿಸುವವರು ಧಾರವಾಡದಿಂದ ವಂದೇ ಭಾರತ ರೈಲು ಆರಂಭ ಆಗಬೇಕೆಂಬ ಬೇಡಿಕೆ ಇತ್ತು ಇದು ಆಗಿದೆ.
ಬಹಳ ದಿನಗಳ ಬೇಡಿಕೆಯಂತೆ ಧಾರವಾಡದಿಂದ ಆರಂಭ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ವಂದೇ ಭಾರತ ರೈಲು ನಿರ್ವಹಣೆ ಮಾಡಲು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು. ಅದನಂತರ ವಂದೇ ಭಾರತ ರೈಲು ಸಮಯವನ್ನ ಬದಲಾವಣೆ ಮಾಡಲಾಗುತ್ತದೆ
ಈ ಟ್ರೈನ್ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಟ್ರೈನ್, ಸ್ವದೇಶಿ ನಿರ್ಮಾಣ ಟ್ರೈನ್ ಆಗಿದ್ದುಮುಂದಿನ ಮೂರುವರ್ಷಗಳಲ್ಲಿ 400 ವಂದೇ ಭಾರತ ರೈಲು ಓಡಿಸುವ ಗುರಿ ಇದೆ ಎಂದರು.
ಬೆಳಗಾವಿಯಿಂದ ಈ ರೈಲು ಓಡಿಸಬೇಕೆಂಬ ಬೇಡಿದೆ ಇದೆ. ಬೆಳಗಾವಿಯಿಂದ ಈ ರೈಲು ಓಡಿಸಬೇಕೆಂಬ ಬೇಡಿದೆ ಇದ್ದು. ಅದನ್ನು ಸಹ ನಮ್ಮ ಸರ್ಕಾರ ಈಡೇರಿಸುತ್ತದೆ ಎಂದು ಭರವಸೆ ನೀಡಿದರು. ಈ ವಂದೇ ಭಾರತ ರೈಲಿಗೆ 50 ಜನರು ಬುಕ್ಕಿಂಗ್ ಮಾಡಿದ್ದಾರೆ ಎಂದರು