ಬೀಜಿಂಗ್ : ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ಜುಲೈ 4ರಂದು ಶಾಂಘೈ ಸಹಕಾರ ಸಂಘದ ಸಮಾವೇಶ ನಡೆಯಲಿದ್ದು, ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಂದರ ವಿನ್ಯಾಸದ ‘ನವದೆಹಲಿ ಸಭಾಂಗಣ’ವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಉದ್ಘಾಟಿಸಲಾಯಿತು.
ಈ ವೇಳೆ ವಿಡಿಯೊ ಮೂಲಕ ಮಾತನಾಡಿದ ಸಚಿವ ಎಸ್.ಜೈಶಂಕರ್, ‘ಎಸ್ಸಿಒ ಪ್ರಧಾನ ಕಾರ್ಯದರ್ಶಿ, ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಭಾಂಗಣ ಉದ್ಘಾಟಿಸಿರುವುದು ಸಂತಸ ತಂದಿದೆ. ಇದು ಭಾರತದ ವೈವಿದ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ. ಈ ಸಭಾಂಗಣವು ‘ಪುಟ್ಟ ಭಾರತ’ವಾಗಿರಲಿದೆ’ ಎಂದರು.
‘ಇದು ಸಾಂಪ್ರದಾಯಿಕ ವಿನ್ಯಾಸದ ಜೊತೆ ಆಧುನಿಕ ತಂತ್ರಜ್ಞಾನ, ಸಾಧನಗಳನ್ನೂ ಒಳಗೊಂಡಿದೆ. ‘ವಸುಧೈವ ಕುಟುಂಬಕಂ ‘ ಎಂಬ ಭಾರತದ ಬದ್ಧತೆಗೆ ಸಾಕ್ಷಿಯಾಗಲಿದೆ’ ಎಂದು ತಿಳಿಸಿದರು.