ಬೆಂಗಳೂರು: ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ, ಬಿಜೆಪಿ ಸದ್ಯ ಮನೆಯೊಂದು ಮೂರು ಬಾಗಿಲು ಆಗಿದೆ. ಸೋಲಿಗೆ ನೀವೇ ಕಾರಣ,ನೀವೇ ಕಾರಣ ಎಂದು ಪರಸ್ಪರ ಕೆಸರೆರೆಚಾಟದಲ್ಲಿ ಕಮಲ ನಾಯಕರು ತೊಡಗಿದ್ದಾರೆ.ವಿಪಕ್ಷ ನಾಯಕ ಆಯ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ವಿಚಾರವೇ, ಬಿಎಸ್ವೈ ಹಾಗೂ ಬಿಎಲ್ ಸಂತೋಷ್ ಬಣಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.
ಯೆಸ್,ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ ಛಿದ್ರ ಛಿದ್ರವಾಗಿದೆ.ಶಿಸ್ತಿನ ಪಕ್ಷದಲ್ಲಿ ಆಶಿಸ್ತು ಸ್ಪೋಟವಾಗಿದೆ.ಹೀನಾಯ ಸೋಲನ್ನ ಅರಗಿಸಿಕೊಳ್ಳಲ್ಲು ಸಾಧ್ಯವಾಗದ ಕೆಲ ಬಿಜೆಪಿ ನಾಯಕರು,ಪಕ್ಷದ ವಿರುದ್ಧವೇ ಬುಸು ಬುಸು ಎನ್ನುತ್ತಿದ್ದಾರೆ.ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಿದ್ದಾರೆ ಎಂದು ಕೆಲ ನಾಯಕರು ಬಿಎಸ್ವೈ ಹಾಗೂ ಬೊಮ್ಮಾಯಿ ವಿರುದ್ಧವೇ ನೇರವಾಗಿ ಕಿಡಿಕಾರುತ್ತಿದ್ದಾರೆ.ವಲಸಿಗರ ಬಗ್ಗೆಯು ಕೆ.ಎಸ್.ಈಶ್ವರಪ್ಪ ವಾಕ್ ಪ್ರಹಾರ ನಡೆಸಿದ್ದಾರೆ.ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಿತ್ತಾಟ, ಮನೆಯೊಂದು ಮೂರು ಬಾಗಿಲು ಆದಂತೆ ಆಗಿದೆ.
ಮುಂದಿನ ಸೋಮವಾರದಿಂದ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿದೆ.ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಿದ್ರೆ ಇಷ್ಟೋತ್ತಿಗೆ ವಿರೋಧ ಪಕ್ಷದ ನಾಯಕನನ್ನ ಬಿಜೆಪಿ ಆಯ್ಕೆ ಮಾಡಬೇಕಿತ್ತು.ಆದ್ರೆ, ಚುನಾವಣೆಯಲ್ಲಿ ಹೀನಾಯ ಸೋಲು ಬಿಎಸ್ವೈ ಹಾಗೂ ಬಿ.ಎಲ್.ಸಂತೋಷ್ ಬಣಗಳ ನಡುವೆ ಬಹಿರಂಗವಾಗಿಯೇ ಕಿತ್ತಾಟ ನಡೆಸುತ್ತಿದ್ದಾರೆ.ಬಿಎಸ್ವೈ ಬಣದಲ್ಲಿ ಗುರುತಿಸಿಕೊಂಡಿರೋರಿಗೆ ಹೊಂದಾಣಿಕೆ ಅಸ್ತ್ರ ಆರೋಪ ಬಿಡೋ ಮೂಲಕ ವಿರೋಧ ಪಕ್ಷ ನಾಯಕ ಸ್ಥಾನ ತಪ್ಪಿಸಲು ಬಿ.ಎಲ್.ಸಂತೋಷ್ ರಣತಂತ್ರ ನಡೆಸಿತ್ತು.ಹೀಗಾಗಿ,ಬಿ.ಎಲ್.ಸಂತೋಷ್ ಬಣದ ವಿರುದ್ಧ ಬಿಎಸ್ವೈ ಬಣ ಕೆಂಡಕಾರುತ್ತಿದ್ದಾರೆ.
ಒಟ್ಟಾರೆ, ಬಿಜೆಪಿಯಲ್ಲಿ ಸ್ಪೋಟವಾಗಿರುವ ಆಂತರಿಕ ಅಸಮಧಾನ ಸದ್ಯ ತಣ್ಣಗಾಗುವ ಯಾವುದೇ ಲಕ್ಷಣ ಕಾಣ್ತಿಲ್ಲ.ವಿಪಕ್ಷ ನಾಯಕನ ಆಯ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷನನ್ನ ಆಯ್ಕೆ ಮಾಡಿದ ಬಳಿಕವೂ ಬಿಜೆಪಿಯಲ್ಲಿ ಆಂತರಿಕ ಬೇಗುದಿ ಮತ್ತಷ್ಟು ಸ್ಟೋಟವಾಗುವ ಸಾಧ್ಯತೆ ಇದೆ.