ಬೆಂಗಳೂರು: ಹಾಲಿ,ಮಾಜಿ ಡಿಸಿಎಂ ಗಳ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬೀದಿಗೆ ಬಿದ್ದಿದೆ..ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ವೇಳೆಯೇ ಡಿಕೆ ಹಾಗೂ ಅಶ್ವಥ್ ನಾರಾಯಣ್ ನಡುವಿನ ಕೋಲ್ಡ್ ವಾರ್ ಸ್ಪೋಟಗೊಂಡಿದೆ.. ಶ್ರೀಗಳ ಮುಂದೆ ಪರಸ್ಪರ ಕುಶಲೋಪರಿ ಹಂಚಿಕೊಂಡ ನಾಯಕರು ಹೊರಗೆ ಬರುತ್ತಲೇಕಿಡಿಕಾರಿದ್ದಾರೆ..ರಾಮನಗರದ ಹಿಡಿತಕ್ಕೆ ಶುರುವಾದ ಗದ್ದಲ ಸರ್ಕಾರ ಬಿದ್ದು ಹೊಸ ಸರ್ಕಾರ ಬಂದ್ರೂ ಕಡಿಮೆಯಾಗ್ತಿಲ್ಲ..ಈ ರಾಜಕೀಯ ಜಿದ್ದಿನ ಹಿಂದಿದೆ ಹಲವುಲೆಕ್ಕಾಚಾರ..ಏನು ಎತ್ತ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಯಸ್..ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬೀದಿಗೆ ಬಿದ್ದಿದೆ..ರಾಮನಗರದ ಹಿಡಿತಕ್ಕಾಗಿ ಬಿಜೆಪಿಸರ್ಕಾರದ ಅವಧಿಯಲ್ಲಿ ಶುರುವಾದ ಘರ್ಷಣೆ ಸರ್ಕಾರ ಬಿದ್ದು ಹೊಸ ಸರ್ಕಾರ ಬಂದ್ರೂ ನಿಲ್ತಿಲ್ಲ..ಯಾಕಂದ್ರೆ ಬೆಂಗಳೂರಿನಲ್ಲಿಂದು ನಡೆದ ಕೆಂಪೇಗೌಡರ ಜಯಂತಿ ವೇಳೆಯೂ ಅವರ ನಡುವಿನ ಗುದ್ದಾಟ ಜಗಜ್ಜಾಹೀರಾಗಿದೆ..ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು ನಿರ್ಮಲಾನಂದರ ಸಮ್ಮುಖದಲ್ಲಿ ಕುಶಲೋಪರಿಹಂಚಿಕೊಂಡವರು ಹೊರಗೆ ಬರುತ್ತಲೇ ಹಾವು,ಮುಂಗುಸಿ ರೀತಿ ಮಾತಿನ ವಾಕ್ಸಮರ ನಡೆಸಿದ್ದಾರೆ..ಅಶ್ವಥ್ ನಾರಾಯಣ್ ರಾಮನಗರ ಮೂಲದ ಬಗ್ಗೆ ಡಿಕೆಶಿ ಕಾಲೆಳೆದಿದ್ರು..ಇದಕ್ಕೆಪ್ರತಿಯಾಗಿ ಅಶ್ಚಥ್ ನಾರಾಯಣ್ ಡಿಕೆಶಿ ಬೆಂಗಳೂರು ಮೂಲದ ಬಗ್ಗೆ ಕೆದಕಿದ್ದರು..ಇದಕ್ಕೆಪ್ರತಿಯಾಗಿ ಡಿಕೆಶಿ ಕೂಡ ತಿರುಗೇಟು ಕೊಟ್ಟಿದ್ದಾರೆ..ನಾನು ಆರನೇ ವರ್ಷಕ್ಕೇ ಬೆಂಗಳೂರಿಗೆ ಬಂದವನು..ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಓದಿದವನು ಅಂತ ತಿರುಗೇಟು ನೀಡಿದ್ದಾರೆ..ಈ ಮೂಲಕ ಇಬ್ಬರ ನಡುವಿನ ಕೋಲ್ಡ್ ವಾರ್ ಮತ್ತೊಮ್ಮೆ ಬೀದಿಗೆ ಬಿದ್ದಂತಾಗಿದೆ..
ಯಸ್..ಇಲ್ಲೇ ಇರೋದು ನೋಡಿ..ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇಕೆಂದೇ ಅಶ್ಚಥ್ ನಾರಾಯಣ್ ಗೆ ರಾಮನಗರ ಉಸ್ತುವಾರಿಯನ್ನ ನೀಡಲಾಗಿತ್ತು..ಅದ್ರ ಹಿಂದೆ ಬಿ.ಎಲ್.ಸಂತೋಷ್ ಅವ್ರ ಲೆಕ್ಕಾಚಾರವೂ ಇತ್ತು..ಅಶ್ವಥ್ ನಾರಾಯಣ್ ಮೂಲಕವೇ ಡಿಕೆ ಬ್ರದರ್ಸ್ ಹಾಗೂ ಮತ್ತೊಂದು ಕಡೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿಯವರನ್ನ ಬಗ್ಗಿಸುವ ಪ್ಲಾನ್ ಇತ್ತು..ಅದ್ರಂತೆ ಅಶ್ಚಥ್ ನಾರಾಯಣ್ ಕೂಡ ಡಿಕೆ ಬ್ರದರ್ಸ್ ಹಾಗೂ ಹೆಚ್ಡಿಕೆ ವಿರುದ್ಧ ನೀನಾ ನಾನಾ ಅನ್ನುವಷ್ಟರ ಮಟ್ಟಿಗೆ ಫೈಟ್ ನಡೆಸಿದ್ದರು..ವೇದಿಕೆ ಕಾರ್ಯಕ್ರಮದಲ್ಲೇ ಡಿ.ಕೆ.ಸುರೇಶ್ ವಿರುದ್ಧ ಏರು ಧ್ವನಿಯಲ್ಲಿ ಗುಡುಗಿದ್ದರು..ಕುಮಾರಸ್ವಾಮಿಯವರ ವಿರುದ್ಧ ಸದನದೊಳಗೇ ತೊಡೆತಟ್ಟಿದ್ದರು..ಇದು ಇಬ್ಬರು ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು..ಮಲ್ಲೇಶ್ವರಂನಿಂದ ಬಂದು ರಾಮನಗರದಲ್ಲಿ ನಮಗೇ ಪಾಠ ಮಾಡ್ತಾನೇ ಅಂತ ಬುಸುಗುಡುತ್ತಿದ್ದರು..ಇತ್ತ ಅಶ್ವಥ್ ನಾರಾಯಣ್ ಕೂಡ ಒಕ್ಕಲಿಗ ಸಮುದಾಯದ ನಾಯಕನಾಗಬೇಕೆಂಬ ಜಿದ್ದಿಗೆ ಇಂದಿಗೂ ಡಿಕೆ ಬ್ರದರ್ಸ್ ಹಾಗೂ ಹೆಚ್ಡಿಕೆ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ರು..ಅದು ಇಂದು ಕೆಂಪೇಗೌಡರ ಜಯಂತಿ ವೇಳೆ ಮತ್ತೊಮ್ಮೆ ಸ್ಪೋಟಗೊಂಡಿದೆಯಷ್ಟೇ.
ಇನ್ನು ಅಶ್ವಥ್ ನಾರಾಯಣ್ ಪ್ರಸ್ತುತ ಡಿಕೆಶಿ ವಿರುದ್ಧ ಕತ್ತಿಮಸೆಯೋಕೆ ಕಾರಣ ಕೂಡ ಇದೆ..ಯಾಕಂದ್ರೆ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸ್ತಿದೆ..ರಾಜ್ಯಾಧ್ಯಕ್ಷರ ಬದಲಾವಣೆ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ನಡೆಯಬೇಕಿದೆ..ಅಶ್ವಥ್ ನಾರಾಯಣ್ ಎರಡೂ ಹುದ್ದೆಗೂ ಕಣ್ಣಿಟ್ಟಿದ್ದಾರೆ..ಡಿಕೆ ಹಾಗೂ ಹೆಚ್ಡಿಕೆ ವಿರುದ್ಧ ನಿರಂತರವಾಗಿ ಗುಡುಗುತ್ತಿದ್ದಾರೆ..ಈ ಮೂಲಕ ವರಿಷ್ಠರ ಗಮನಸೆಳೆಯುವ ಪ್ರಯತ್ನ ನಡೆಸಿದ್ದಾರೆ..ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನ ಸಮರ್ಥವಾಗಿ ಎದುರಿಸುವವರೇ ಬೇಕಿದೆ..ಹಾಗಾಗಿಯೇ ಅಶ್ವಥ್ ನಾರಾಯಣ್ ಕಡೆ ಹೈಕಮಾಂಡ್ ತಿರುಗುವ ಲಕ್ಷಣಗಳು ಇವೆ..
ಒಟ್ನಲ್ಲಿ ರಾಮನಗರದಲ್ಲಿ ಶುರುವಾದ ಅಶ್ವಥ್ ನಾರಾಯಣ್ ಹಾಗೂ ಡಿಕೆಬ್ರದರ್ಸ್ ನಡುವಿನ ಕಚ್ಚಾಟ ಇದೀಗ ಮತ್ತೊಮ್ಮೆ ಸ್ಪೋಟಗೊಂಡಿದೆ..ಕೆಂಪೇಗೌಡರ ಜಯಂತಿ ವೇಳೆಯೇ ಹೊರಬಿದ್ದಿರೋದನ್ನ ನೋಡಿದ್ರೆ ಇದು ಇಲ್ಲಿಗೇ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ..ಇದು ಮತ್ತಷ್ಟು ಮುಂದುವರಿಯುವ ಸೂಚನೆಗಳು ಹೆಚ್ಚಾಗಿವೆ..