ಹುಬ್ಬಳ್ಳಿ: ಒಂದು ಮುಂಗಾರು ಹಂಗಾಮು ಹಾಳು ಇನ್ನೊಂದು ಕಡೆ ಟೊಮ್ಯಾಟೊ ಸೇರಿದಂತೆ ತರಕಾರಿ ಬೆಲೆ ಏರಿಕೆ ಆಗಿದ್ದು ಅದರಲ್ಲೂ ಟೊಮ್ಯಾಟೊ ಬೆಲೆ ಗಗನಕ್ಕೆ ಹೋಗಿದ್ದರಿಂದ ಜನಸಾಮಾನ್ಯರು ಕಂಗಾಲು ಆಗಿದ್ದಾರೆ. ಟೊಮೆಟೊ ಬೆಲೆ ಹೊಸ ದಾಖಲೆ ಬರೆದಿದ್ದು, ಸತತವಾಗಿ ಬೆಲೆ ಏರಿಕೆಯಾಗುತ್ತಲೇ ಇರುವ ಪರಿಣಾಮ ಕೆಜಿ ಟೊಮೆಟೊ ಬೆಲೆ 100 ರೂಪಾಯಿಯ ಗಡಿ ದಾಟಿದೆ. ಒಂದು ಸರ್ಕಾರ ಐದು ಗ್ಯಾರಂಟಿಗಳಲ್ಲಿ ಗ್ಯಾರಂಟಿಗಳನ್ನ ಜಾರಿಗೆ ತರುವ ಪ್ರಯತ್ನ ಇನ್ನೊಂದು ಕಡೆ ಟೊಮ್ಯಾಟೊ ದಂತಹ ತರಕಾರಿ ಬೆಲೆ ಏರಿಕೆ ಬಿಸಿಯಿಂದಾಗಿ ಸರ್ಕಾರಕ್ಕೆ ತಲೆ ಬೇನೆ ಹಾಗಿದೆ.. ಈ ಕುರಿತು ಒಂದು ವಿಶೇಷ ವರದಿ…
ಟೊಮ್ಯಾಟೊ ಬೆಲೆ ಈಗ ನೂರರ ಗಡಿ ದಾಟಿದೆ. ಟೊಮ್ಯಾಟೊ ಬಳಕೆ ಪ್ರತಿಯೊಂದು ಅಡುಗೆ ಮಾಡಲು ಅತ್ಯವಶ್ಯಕ ಆದರೆ ಈಗ ಬೆಲೆ ಏರಿಕೆಯಿಂದ ಒಂದು ಜನಸಾಮಾನ್ಯರು ಆರ್ಥಿಕ ಹೊಡೆತಕ್ಕೆ ಸಿಲುಕಿದರೆ ಇನ್ನೊಂದು ಕಡೆ ಸರ್ಕಾರಕ್ಕೋ ಕೂಡ ದೊಡ್ಡ ಸವಾಲು ಆಗಿದೆ. ಸಗಟು ಮಾರುಕಟ್ಟೆ ಬೆಲೆಗಳನ್ನು ಧಾರವಾಡ ಜಿಲ್ಲೆಯಲ್ಲಿ ನೋಡುವುದಾದರೆ ನವಲಗುಂದದಲ್ಲಿ 110 ಕೆಜಿಗೆ ರೂಪಾಯಿ ಮಾರಾಟವಾಗಿದೆ. ಧಾರವಾಡದ ಕೆಲವೆಡೆ 90 ರೂಪಾಯಿ ಇದ್ದರೆ, ಕೆಲ ಮಾರುಕಟ್ಟೆಗಳಲ್ಲಿ 95 ರೂಪಾಯಿಗೆ ಮಾಡಲಾಗುತ್ತಿದೆ.
ಕೆಲಕಡೆ ಅತೀಯಾದ ಮಳೆ ಇನ್ನೂ ಕೇಲ ಕಡೆಗಳಲ್ಲಿ ಮಳೆಯಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದ್ದು, ಕೆಲವು ಕಡೆಗಳಲ್ಲಿ ಬಿಸಿಯಿಂದಾಗಿ ಬೆಳೆ ಸರಿಯಾಗಿ ಆಗಿಲ್ಲ. ಹಿಂದಿನ ವರ್ಷದಲ್ಲಿ ಎಲ್ಲಾ ಕಡೆ ರೈತರು ಟೊಮೆಟೊ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ ಸರಿಯಾಗಿ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದರು.
ಸದ್ಯ ಮಾರುಕಟ್ಟೆಗಳು, ಮಾಲ್, ಸೂಪರ್ ಮಾರುಕಟ್ಟೆಗಳು ಉತ್ತಮ ಗುಣಮಟ್ಟದ ಕೆಜಿ ಟೊಮೆಟೊ 120 ರಿಂದ 150 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡನೇ ಮತ್ತು ಮೂರನೇ ಗುಣಮಟ್ಟದ ಟೊಮೆಟೊವನ್ನು ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ತಳ್ಳುವ ಗಾಡಿಗಳಲ್ಲೂ ಮಾರಾಟ ಮಾಡುತ್ತಿರುವ ಟೊಅಸುಪಾಸಿನಲ್ಲಿದೆ. ಅಡುಗೆಗೆ ಹೆಚ್ಚಾಗಿ ಬಳಸುವ ಟೊಮ್ಯಾಟೋ ಬೆಲೆ ಕೇಳಿದರೆ ಶಾಕ್ ಹೊಡೆಯುತಿದ್ದು ಮಾರುಕಟ್ಟೆಗಳಲ್ಲಿ ಟೊಮ್ಯಾಟೊ ರೇಟ್ ಕೇಳುವುದೇ ಇಲ್ಲ. ಕೆಜಿ ಅದರಲ್ಲೂ ಬಕ್ರೀದ್ ಹಬ್ಬ ಬೇರೆ ಹಬ್ಬದ ಹೊಸ್ತಿಲ್ಲಲಿ ಬೆಲೆ ಏರಿಕೆ ಭಾರೀ ಹೊಡೆತ ಕೊಟ್ಟಿದೆ. ಮಾಂಸದ ಅಡುಗೆ, ಬಿರಿಯಾನಿ, ಪಲಾವ್, ಸಾಂಬಾರು ಹೀಗೆ ಏನೇ ಮಾಡಿದರೂ ಟೊಮ್ಯಾಟೋ ಬಳಸಲೇ ಬೇಕು. ಅಡುಗೆಯ ರುಚಿ ಹೆಚ್ಚಿಸುವುದೇ ತರಕಾರಿಗಳು.ಆದ್ದರಿಂದ ನಾವು ಸಹ ಅನಿವಾರ್ಯವಾಗಿ ಸಿಕ್ಕ ಬೆಲೆಗೆ ಟೊಮ್ಯಾಟೊ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಇನ್ನು ಮುಂಗಾರು ಮಳೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈ ಕೊಟ್ಟಿದ್ದು ಇನ್ನಷ್ಟು ಟೊಮ್ಯಾಟೊ ಸೇರಿದಂತೆ ತರಕಾರಿ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ.