ಬೆಂಗಳೂರು ;– ಸುಳ್ಳೇ ನಮ್ಮನೆ ದೇವರು ಎಂಬ ಮಾತು ಸಿದ್ದರಾಮಯ್ಯರಿಗೆ ಅನ್ವಯವಾಗಲಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಸರಕಾರದ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ದೇಶದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುವ ಐದು ಕೆಜಿ ಅಕ್ಕಿ ತಮ್ಮದೆಂದು ಯಾವುದೇ ಮುಜುಗರವಿಲ್ಲದೇ ಸುಳ್ಳು ಹೇಳುವುದು. “ಸುಳ್ಳೇ ನಿಮ್ಮನೆ ದೇವರು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಕಿಡಿ ಕಾರಿದ್ದಾರೆ.
”ಸಿದ್ದರಾಮಯ್ಯನವರೇ ರಾಜ್ಯದ ಜನತೆಗೆ ನೀವು ಕೊಡಬೇಕಾಗಿರುವುದು ಕೇಂದ್ರ ಸರಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಹೊರತುಪಡಿಸಿ ನೀವು ನೀಡಿದ ಗ್ಯಾರಂಟಿಯ 10 ಕೆಜಿ ಅಕ್ಕಿ. ಹಿಂದಿನ ಬಾರಿಯಂತೆ ಅಕ್ಕಿ ನಿಂದು ಚೀಲ ನಂದು ಎಂದು ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.