ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಮಂಗಳಮುಖಿಯರ ದಾಂಧಲೆ ಇನ್ನೂ ಕೂಡ ನಿಂತಿಲ್ಲ. ಅಷ್ಟಕ್ಕೂ ಗೃಹ ಪ್ರವೇಶದ ವೇಳೆ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ? ಹಾಗಾದರೆ ಈ ಸ್ಟೋರಿ ಪೂರ್ತಿ ಓದಿ.
ಹೌದು, ಬೆಂಗಳೂರಿನ ವಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಗೃಹ ಪ್ರವೇಶದ ವೇಳೆ ಏಕಾಏಕಿ ನುಗ್ಗಿದ ಮುಂಗಳಮುಖಿಯರು ಅಸಭ್ಯ ವರ್ತನೆ ತೋರಿ ದಾಂಧಲೆ ನಡೆಸಿರುವ ಘಟನೆ ಜರುಗಿದೆ.
ಇಂದು ಮಧ್ಯಾಹ್ನ 2:30ರ ಸುಮಾರಿಗೆ ಮುಂಗಳಮುಖಿಯರು ಏಕಾಏಕಿ ಗೃಹ ಪ್ರವೇಶದ ಮನೆಯೊಳಗೆ ನುಗ್ಗಿದ್ದಾರೆ. ಮಂಗಳಮುಖಿಯರನ್ನು ನೋಡಿ ಕುಟುಂಬದವರು ಊಟಕ್ಕೆ ಕರೆದಿದ್ದಾರೆ. ಆದರೆ ‘ನಮಗೆ ಹಣ ಕೊಡಿ’ ಎಂದು ಬಂದಿದ್ದ ಮೂವರು ಮಂಗಳಮುಖಿಯರು ಕಿರಿಕ್ ತೆಗೆದಿದ್ದಾರೆ. ನಂತರ ಐನೂರು ರೂಪಾಯಿ ನೀಡಲಾಗಿದೆ.
ಆದರೆ ಇಷ್ಟಕ್ಕೆ ಸುಮ್ಮನಾಗದ ಮುಂಗಳಮುಖಿಯರು ಒಬ್ಬೊಬ್ಬರಿಗೆ ಐದೈದು ಸಾವಿರ ನೀಡುವಂತೆ ಖ್ಯಾತೆ ತೆಗೆದಿದ್ದಕ್ಕೆ ಮತ್ತೆ ಮೂವರಿಗೂ ಐದು ಸಾವಿರ ನೀಡಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಮಂಗಳಮುಖಿಯರು ಹಣ ಪಡೆಯದೆ ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಾಯಿಗೆ ಬಂದಂತೆ ಬೈದು, ಕುಟುಂಬಸ್ಥರ ಮುಂದೆ ಅಸಭ್ಯ ವರ್ತನೆ ತೋರಿದ್ದಾರೆ ಎಂದು ತಿಳಿದು ಬಂದಿದೆ.