ಮೈಸೂರು- ಬೆಂಗಳೂರು ನಡುವಿನ ಎಕ್ಸ್’ಪ್ರೆಸ್ ವೇಯಲ್ಲಿ ಅಪಘಾತಗಳು ಸಂಭವಿಸಲು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಹೆದ್ದಾರಿಯನ್ನು ಮೈಸೂರು ಬೆಂಗಳೂರು ನಡುವೆ ಎಕ್ಸ್ಪ್ರೆಸ್ ಹೈವೇ ಮಾಡಿದ್ದೇವೆ. ಇದು ರೇಸಿಂಗ್ ಟ್ರ್ಯಾಕ್ ಅಲ್ಲ. ರೇಸಿಂಗ್ ಮಾಡಲು ಬೇರೆ ಕಡೆ ವ್ಯವಸ್ಥೆ ಇದೆ. ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ ಎಂಬುದನ್ನು ಒಪ್ಪುವುದಿಲ್ಲ. ಹಾಗೊಮ್ಮೆ ಅದನ್ನು ತೋರಿಸಿಕೊಟ್ಟರೆ ಇಂಜಿನಿಯರ್ ಗಳನ್ನು ಕರೆಯಿಸಿ ಅವರನ್ನು ಸರಿ ಮಾಡುತ್ತೇನೆ ಎಂದು ಪ್ರತಾಪಸಿಂಹ ಹೆದ್ದಾರಿ ಕುರಿತ ಟೀಕಾಕಾರರಿಗೆ ತಿರುಗೇಟು ನೀಡಿದರು