ರಾಮನಗರ: ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆ ಸುಮಾರು ಬುಧವಾರ ಸಂಜೆ ರಾಮನಗರ ತಾಲೂಕಿಗೆ ಬಸವನಪುರ (ಮದುರಾ ಗಾರ್ಮೆಂಟ್ಸ್ ) ಬಳಿ ಜರುಗಿದ್ದು ಈ ಸಂಬಂಧ ಪಟ್ಟಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ…
ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕ, ಸೀಟ್ ಬೆಲ್ಟ್ ಹಾಕಿಲ್ಲ ಎಂದು ಟ್ರಾಫಿಕ್ ಠಾಣೆ ಸಿಬ್ಬಂದಿ ಮೋಹನ್ ಎಂಬಾಂತ ಕಾರು ತಡೆದಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎಸ್ಪಿ ಕಚೇರಿಯಲ್ಲಿ ಸಿಸಿ ಟಿವಿ ಯಲ್ಲಿ ಈ ಬಗ್ಗೆ ಪರಿಶೀಲಿಸುತ್ತೆವೆ ಎಂದು ಪೊಲೀಸರು ಸುಮ್ಮನಾಗಿದ್ದಾರೆ. ಬೆಂಗಳೂರು ಕಡೆಗೆ ಪ್ರಯಾಣಿಸಿದ ಚಾಲಕ, ಐದು ನಿಮಿಷಗಳ ಬಳಿಕ ಮತ್ತೆ ಪೊಲೀಸರ ಬಳಿ ಖ್ಯಾತೆ ತೆಗೆದಿದ್ದಾನೆ. ಎಲ್ಲರನ್ನು ಹಿಡಿಯಬೇಕು. ಯಾರನ್ನು ಬಿಡುವಂತಿಲ್ಲ ಎಂದು ಗಲಾಟೆ ನಡೆಸಿದ್ದಾನೆ.
ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಇದನ್ನು ವಿರೋಧಿಸಿ ಹಲ್ಲೆ ನಡೆಸಿದವನ ಮೇಲೆ ಗಲಾಟೆ ನಡೆಸಿದ್ದಾರೆ. ಬಳಿಕ ಟ್ರಾಫಿಕ್ ಸಿಬ್ಬಂದಿ ಮೋಹನ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಹಲ್ಲೆ ನಡೆಸಿದ ವ್ಯಕ್ತಿ ಸಹ ಸಾರ್ವಜನಿಕರ ಮೇಲೆ ಪ್ರತಿ ದೂರು ದಾಖಲಿಸಿದ್ದಾನೆ. ಸಧ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.