ಬೆಂಗಳೂರು: ಆಧಾರ್ ಹಾಗೂ ಪಾನ್ಕಾರ್ಡ್ ಲಿಂಕ್ಗೆ ಎಕ್ಸೆಟೆಂಡ್ ಮಾಡಿದ್ದ ಸಮಯ ಇಂದಿಗೆ ಮುಕ್ತಾಯವಾಗುತ್ತದೆ. ಆಧಾರ್ ಮತ್ತು ಪಾನ್ ಲಿಂಕ್ಗೆ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು.
ಆದ್ರೆ, ಸಾಕಷ್ಟು ಜನರು ಲಿಂಕ್ ಮಾಡಿಸಿಕೊಳ್ಳದ ಹಿನ್ನೆಲೆ ಸರ್ಕಾರದ ನಿರ್ಧಾರದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಮಾರ್ಚ್ 30 ರಿಂದ ಜೂನ್ 30 ರವರೆಗೆ ಹೆಚ್ಚಿನ ಅವಧಿ ನೀಡಲಾಗಿತ್ತು.
ಈ ಅವಧಿ ಇಂದಿಗೆ ಮುಗಿಯಲಿದ್ದು, ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಅಂದ್ರೆ, 10 ಸಾವಿರ ದಂಡ ಬೀಳುವುದರ ಜೊತೆಗೆ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುವ ಸಾಧ್ಯತೆಯಿದೆ.