ಹುಬ್ಬಳ್ಳಿ: ತಾಲ್ಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಹ್ಮದ್ ಜಹೀರ್ ಸೈಯದಲಿ 2022-23ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮಹ್ಮದ್ ಜಹೀರ್ ವಿಜ್ಞಾನ ಶಿಕ್ಷಕ, ವಿಜ್ಞಾನ ಸಂವಹನಕಾರ ಸಂಜೀವಕುಮಾರ ಭೂಶೆಟ್ಟಿ ಅವರ ಮಾರ್ಗದರ್ಶನದಲ್ಲಿ ‘ಥರ್ಮೋ ಎಲೆಕ್ಟ್ರಿಕ್ ಹೆಲ್ಮೆಟ್ ಕೂಲಿಂಗ್ ಸಿಸ್ಟಮ್’ ಮಾದರಿ ಸಿದ್ಧಪಡಿಸಿದ್ದ.
ಈ ಹೆಲ್ಮೆಟ್ನಿಂದ ನಗರ ಪ್ರದೇಶಗಳಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ ಬಿಸಿಲು ಮತ್ತು ಹೆಚ್ಚಿನ ಉಷ್ಣತೆ ಇರುವ ಕಡೆ ಕೆಲಸ ಮಾಡುವ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತದೆ.
ವಿದ್ಯಾರ್ಥಿಯನ್ನು ಎಸ್ಡಿಎಂಸಿ ಸದಸ್ಯರಾದ ಬಸವನಗೌಡ್ರು ಕೆಂಚನಗೌಡ್ರು, ಶ್ರೀಕಾಂತ ಪತ್ತಾರ, ಈಶ್ವರ ನೂಲ್ವಿ, ರವಿರಾಜ ಬಡಿಗೇರ, ಗುರುನಾಥ ನರಗುಂದ, ಮೀನಾಕ್ಷಿ ಚಂದರಗಿ, ರೇಣುಕಾ ತಂಬೂರಿ, ಲಲಿತಾ ನೆಲಗುಡ್ಡದ, ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ನಿರ್ಮಲಾ ಕಟಕಧೊಂಡ ಅಭಿನಂದಿಸಿದ್ದಾರೆ.