ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಮೃತ ಸನ್ಯಾಸಿ ಮನೆಯಲ್ಲಿ ವಿವಿಧ ಕಡೆಗಳಲ್ಲಿಟ್ಟಿದ್ದ 30 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ. ಹೊಳಲ್ಕೆರೆ ಪಟ್ಟಣದ ಮನೆಯಲ್ಲಿ ವಾರದ ಹಿಂದೆ ಸನ್ಯಾಸಿ ಗಂಗಾಧರ ಶಾಸ್ತ್ರಿ (70) ಮೃತಪಟ್ಟಿದ್ದರು.
ಅವರಿಗೆ ಯಾರೂ ಇರಲಿಲ್ಲ. ಒಂಟಿಜೀವನ ನಡೆಸುತ್ತಿದ್ದ, ಇವರು ಶಾಸ್ತ್ರ ಹೇಳುವುದು, ಶುಭ ಕಾರ್ಯ ಮಾಡಿಸುವುದು ಪೂಜೆ ಮಾಡಿಸುವ ಕೆಲಸ ಮಾಡಿಸುತ್ತಿದ್ದರು. ಇವರಿಗೆ 16 ಎಕರೆ ಜಮೀನಿದ್ದು, 4 ಎಕರೆ ಅಡಿಕೆ ತೋಟವಿದೆ.ಗದ್ದೆಯನ್ನು ಹೊಂದಿದ್ದಾರೆ.
ಭಕ್ತರಿಂದ ಬಂದ ಕಾಣಿಕೆ ಹಣವೇ ಸುಮಾರು 46 ಸಾವಿರಕ್ಕೂ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಬಂದಿದ್ದು,ಎರಡು ದಿನಗಳ ಹಿಂದೆ ಭಕ್ತರು ಮನೆ ಪರಿಶೀಲಿಸಿದಾಗ ಹಣ ಪತ್ತೆ ಆಗಿದೆ.
ಈ ಹಿನ್ನೆಲೆಯಲ್ಲಿ ಜುಲೈ 7 ಕ್ಕೆಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರು ನಿರ್ಧರಿಸಿದ್ದಾರೆ. ಗಂಗಾಧರ್ ಶಾಸ್ತ್ರಿ ಜಮೀನಿನಲ್ಲಿ ಅವರ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.