ಮಳೆಗಾಲದಲ್ಲಿ ಹೆಚ್ಚಿನವರು ಅನಾರೋಗಕ್ಕೀಡಾಗುತ್ತಾರೆ. ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ ಶೀತ, ನೆಗಡಿ, ಜ್ವರ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಸಾಕಷ್ಟು ಗಮನಹರಿಸಬೇಕಾಗುತ್ತದೆ. ವಿಶೇಷವಾಗಿ ನಾವು ಸೇವಿಸುವ ತರಕಾರಿಗಳತ್ತ ಗಮನನೀಡಬೇಕು ಎನ್ನುತ್ತಾರೆ.
ಸೊಪ್ಪು ಸೇವಿಸಬೇಡಿ
ಸಾಮಾನ್ಯವಾಗಿ ಸೊಪ್ಪು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಆದಷ್ಟು ನೀವು ಸೊಪ್ಪು ಸೇವಿಸೋದನ್ನು ಕಡಿಮೆ ಮಾಡಬೇಕು.
ಮಳೆಗಾಲದಲ್ಲಿ ಸೊಪ್ಪಿನಲ್ಲಿ ಮಣ್ಣು, ಕ್ರೀಮಿ ಕೀಟಗಳು ಹೆಚ್ಚಾಗಿರುತ್ತದೆ. ಹಾಗಾಗಿ ಈ ಪಾಲಕ್, ಹೂ ಕೋಸು , ಎಲೆಕೋಸು ಇವುಗಳನ್ನೆಲ್ಲಾ ಸೇವಿಸದೇ ಇರುವುದು ಉತ್ತಮ. ಅದರ ಬದಲು ಇನ್ನಿತರ ತರಕಾರಿಗಳನ್ನು ಸೇವಿಸಬಹುದು.
ಬದನೆಕಾಯಿ ತಿನ್ನಬೇಡಿ
ಬದನೆಕಾಯಿಯ ನೇರಳೆ ಬಣ್ಣವು ಬಲ್ಬ್ ಆಲ್ಕಲಾಯ್ಡ್ಸ್ ಎಂಬ ರಾಸಾಯನಿಕಗಳ ವರ್ಗದಿಂದ ಬಂದಿದೆ. ಮಳೆಗಾಲದಲ್ಲಿ, ಅಂತಹ ಬೆಳೆಗಳು ಕೀಟಗಳು ಮತ್ತು ಇತರ ಕೀಟಗಳಿಂದ ರಕ್ಷಿಸಲು ಈ ವಿಷಕಾರಿ ಸಂಯುಕ್ತವನ್ನು ಉತ್ಪಾದಿಸುತ್ತವೆ.
ಮಳೆಗಾಲದಲ್ಲಿ ಕೀಟಗಳ ಬಾಧೆ ಹೆಚ್ಚಿರುವಾಗ ಬದನೆಕಾಯಿ ಸೇವನೆಯನ್ನು ಕಡಿಮೆ ಮಾಡಿ. ಇಲ್ಲವಾದಲ್ಲಿ ಆಲ್ಕಲಾಯ್ಡ್ಗಳು ಅಲರ್ಜಿಯ ಪ್ರತಿಕ್ರಿಯೆಗಳು, ಚರ್ಮದ ತುರಿಕೆ, ವಾಕರಿಕೆ ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡಬಹುದು.
ಹೂಕೋಸು
ಹೂಕೋಸು ಹೆಚ್ಚಿನ ತೇವಾಂಶವನ್ನು ಹೊಂದಿದೆ. ಇದರ ಹೊರತಾಗಿ ಇದು ಗ್ಲುಕೋಸಿನೋಲೇಟ್ಗಳು ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಅಲರ್ಜಿ ಅಥವಾ ಸೂಕ್ಷ್ಮವಾಗಿರುವ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈ ರಾಸಾಯನಿಕ ಸಂಯುಕ್ತಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಮಳೆಗಾಲದಲ್ಲಿ ಕಾಲಿಫ್ಲವರ್ನ್ನು ತಿನ್ನದಿರುವುದು. ಹೂ ಕೋಸಿನಲ್ಲಿ ಹುಳುಗಳು ಹೆಚ್ಚಾಗಿರುತ್ತವೆ ಹಾಗಾಗಿ ಅದನ್ನು ತೊಳೆಯುವಾಗ ಬಹಳಷ್ಟು ಜಾಗರೂಕರಾಗಿರಬೇಕು.
ದೊಡ್ಡ ಮೆಣಸು
ದೊಡ್ಡ ಮೆಣಸು ಅಥವಾ ಕ್ಯಾಪ್ಸಿಕಂ ಮಿನರಲ್ಸ್, ಆಂಟಿ ಆಕ್ಸಿಡೆಂಟ್ಸ್ , ವಿಟಮಿನ್ಗಳಿಂದ ಕೂಡಿರುವ ತರಕಾರಿಯಾಗಿದೆ. ಅವನ್ನು ಜಗಿದಾಗ ಐಸೊಥಿಯೋಸೈನೇಟ್ಗಳಾಗಿ ಒಡೆಯುವ ಗ್ಲುಕೋಸಿನೊಲೇಟ್ಗಳು ಎಂಬ ರಾಸಾಯನಿಕಗಳನ್ನು ಹೊಂದಿರುತ್ತವೆ.
ಈ ರಾಸಾಯನಿಕಗಳಿಂದಾಗಿ ಕ್ಯಾಪ್ಸಿಕಂನ್ನು ತಿನ್ನುವಾಗ ವಾಕರಿಕೆ, ವಾಂತಿ, ಅತಿಸಾರ ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು.
ಮಳೆಗಾಲದಲ್ಲಿ ಯಾವೆಲ್ಲಾ ತರಕಾರಿ ಸೇವನೆ ಉತ್ತಮ
ಮಳೆಗಾಲದಲ್ಲಿ ಸೋರೆಕಾಯಿ, ಮೂಲಂಗಿ, ಬೆಳ್ಳುಳ್ಳಿ, ಬೆಂಡೆಕಾಯಿ, ಸೌತೆಕಾಯಿಯನ್ನು ಸೇವಿಸುವುದು ಉತ್ತಮ. ಹಾಗಾಗಿ ಮಳೆಗಾಲದಲ್ಲಿ ಅನಾರೋಗ್ಯದಿಂದ ಪಾರಾಗಬೇಕಾದರೆ ಕೆಲವೊಂದು ತರಕಾರಿಗಳಿಂದ ದೂರವಿರುವುದು ಉತ್ತಮ.