ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಇದೀಗ ಆಸ್ಕರ್ ಜ್ಯೂರಿಯಾಗುವ ಅವಕಾಶವನ್ನು ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಪಡೆದುಕೊಂಡಿದ್ದಾರೆ.
ಹಾಲಿವುಡ್ ಸಿನಿಮಾಗಳನ್ನು ಕೂಡ ಭಾರತೀಯ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದ್ದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ. ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆಸ್ಕರ್ ಟೀಮ್, RRR ತಂಡದ ಸದಸ್ಯರಿಗೆ ಮತ್ತೊಂದು ಗೌರವ ಲಭಿಸಿದೆ. ತಂಡದ ನಾಲ್ವರಿಗೆ ಆಸ್ಕರ್ ಜ್ಯೂರಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅದರಲ್ಲಿ ರಾಮ್ ಚರಣ್, ಜ್ಯೂ.ಎನ್ಟಿಆರ್, ಸಂಗೀತ ನಿರ್ದೇಶಕ ಕೀರವಾಣಿ ಅವರಿಗೆ ಆಸ್ಕರ್ ವಿಜೇತರ ಆಯ್ಕೆಯಲ್ಲಿ ಮತ ಚಲಾಯಿಸುವ ಅವಕಾಶ ಸಿಕ್ಕಿದೆ.
ರಾಮ್ಚರಣ್, ಜ್ಯೂ.ಎನ್ಟಿಆರ್, ಮಣಿರತ್ನಂ, ಕರಣ್ ಜೋಹರ್, ಚೈತನ್ಯಾ ತಮಹಾನ್, ಷಾನೆಕ್ ಸೇನ್, ಎಂ.ಎಂ ಕೀರವಾಣಿ, ಚಂದ್ರಬೋಸ್, ಸಿದ್ದಾರ್ಥ್ ಕಪೂರ್, ಸಾಬು ಸಿರಿಲ್, ಸೆಂಥಿಲ್ ಸೇರಿದಂತೆ ಹಲವರು ಆಸ್ಕರ್ ಜ್ಯೂರಿ ಮೆಂಬರ್ಸ್ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮುಂದಿನ ಆಸ್ಕರ್ ಪ್ರಶಸ್ತಿ ವಿಜೇತರ ಆಯ್ಕೆಯಲ್ಲಿ ಇವರಿಗೆಲ್ಲಾ ಮತ ಚಲಾಯಿಸುವ ಹಕ್ಕು ಸಿಗಲಿದೆ. ಅಕಾಡೆಮಿ ಸದಸ್ಯರಿಗೆ ಮಾತ್ರ ಈ ಅವಕಾಶ ಇರುತ್ತದೆ. ಮುಂದಿನ ವರ್ಷ ಮಾರ್ಚ್ 10ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಆರ್ ಆರ್ ಆರ್ ಸಿನಿಮಾದ ನಿರ್ದೇಶಕ ರಾಜಮೌಳಿಗೆ ಅವಕಾಶ ಸಿಗದೇ ಇರೋದು ಅಚ್ಚರಿಗೆ ಕಾರಣವಾಗಿದೆ.