ಬೆಂಗಳೂರು: ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತನಗರದ ಹಣಕಾಸು ಇಲಾಖೆ ಕಚೇರಿಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಕುರ್ಚಿ ಸರಿಯಿಲ್ಲದಿದ್ದಕ್ಕೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ ತಗೆದುಕೊಂಡ ಘಟನೆ ನಡೆದಿದೆ.
ಇದರ ಬೆನ್ನಲ್ಲೇ ಕೂಡಲೇ ಕಚೇರಿ ಸಿಬ್ಬಂದಿ ಬೇರೆ ಕುರ್ಚಿ ತಂದುಕೊಟ್ಟಿದ್ದಾರೆ.
ನೂತನ ರಾಜ್ಯ ಸರ್ಕಾರದ ಮೊದಲ ಬಜೆಟ್ನ್ನು ಜುಲೈ 7 ರಂದು ಮಂಡನೆ ಮಾಡಲು ನಿರ್ಧರಿಸಲಾಗಿದೆ.
ಈ ಹಿನ್ನಲೆ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಬಜೆಟ್ ಪೂರ್ವಭಾವಿ ಸಭೆ ಮುಂದುವರೆದಿದೆ. ವಸಂತನಗರದ ಹಣಕಾಸು ಇಲಾಖೆಯ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.