ಹುಬ್ಬಳ್ಳಿ: ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಅಕ್ಕಿ ಬದಲಿಗೆ ಹಣ ನೀಡಲು ನಿರ್ಧಾರದ ವಿಚಾರ ಕುರಿತು ‘ನಮಗೆ ದುಡ್ಡು ಬೇಡ, ಅಕ್ಕಿ ಬೇಕೆಂದು ಹುಬ್ಬಳ್ಳಿಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡ್ಡು ಕೊಟ್ರೆ ತಿನ್ನೋಕೆ ಆಗಲ್ಲ. ಅಕ್ಕಿ ಇದ್ರೆ, ಒಂದೊತ್ತಿನ ಊಟ ಮಾಡಬಹುದು ಎಂದಿದ್ದಾರೆ.
ನಾಳೆಯಿಂದಲೇ ಗೃಹಜ್ಯೋತಿ ಅನ್ವಯ ವಿಚಾರವಾಗಿ ಜನರಲ್ಲಿ ಹಲವಾರು ಗೊಂದಲ ಏರ್ಪಟ್ಟಿದೆ. ಹೌದು ಬಹುತೇಕ ಮನೆ ಮಾಲೀಕರು ಮಾತ್ರ ಅರ್ಜಿ ತುಂಬಿದ್ದು, ಬಾಡಿಗೆದಾರರು ಅರ್ಜಿ ತುಂಬಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ಬಾಡಿಗೆದಾರರು ರೆಂಟ್ ಅಗ್ರಿಮೆಂಟ್ ಕೊಡಬೇಕು ಅಂದಿದ್ರು. ಆದ್ರೆ, ರೆಂಟ್ ಅಗ್ರಿಮೆಂಟ್ ಆಪ್ಷನ್ ಅದರಲ್ಲಿಲ್ಲ, ಜೊತೆಗೆ ಆಧಾರ್ ನಂಬರ್ ಲಿಂಕ್ ಆಗುತ್ತಿಲ್ಲ. ಹೀಗೆ ಹತ್ತು ಹಲವು ಗೊಂದಲಗಳು ಏರ್ಪಟ್ಟಿದೆ.