ಮಂಡ್ಯ ;- ಬೆಂಗಳೂರು- ಮೈಸೂರು ಹೆದ್ದಾರಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಅವರು ಪರಿಶೀಲಿಸಿದರು. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗಡಿಭಾಗ ನಿಡಘಟ್ಟದಿಂದ ಮೈಸೂರು ಗಡಿಯವರೆಗೆ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಎಸ್ಪಿ ಎನ್.ಯತೀಶ್ ಜೊತೆಗಿದ್ದರು.
ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ”ಇವತ್ತು ನಾನು ಪರಿಶೀಲನೆ ಮಾಡಿದಾಗ ಜನರು ತಮ್ಮ ಸಮಸ್ಯೆ ಹೇಳಿದ್ದಾರೆ. ಕೆಲವು ಕಡೆ ಸರ್ವಿಸ್ ರೋಡ್ನ ಫುಟ್ಪಾತ್ ಮಾಡಿಲ್ಲ. ಕೆಲವು ಕಡೆ ಅಂಡರ್ ಪಾಸ್ ಮಾಡಿಲ್ಲ. ಕೆಲವೆಡೆ ನೀರು ನುಗಿತ್ತಿದೆ. ಇದರಿಂದ ಅಪಘಾತಗಳು ಆಗುತ್ತಿವೆ. ಸರ್ವಿಸ್ ರೋಡ್ನಲ್ಲಿ ಫೆನ್ಸ್ ಸರಿಯಾಗಿ ಹಾಕಿಲ್ಲ. ಹೆದ್ದಾರಿಯಲ್ಲಿ ಸರಿಯಾಗಿ ಕ್ಯಾಮರಾ ಅಳಡಿಕೆಯಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲಾ ಕೆಲಸಗಳು ಬೇಗ ಆದ್ರೆ ಅಪಘಾತಗಳನ್ನು ತಡೆಯಲು ಸಾಧ್ಯ. ಸಾರ್ವಜನಿಕರು ಸುರಕ್ಷಿತ ಚಾಲನೆಯನ್ನು ಮಾಡಬೇಕು” ಎಂದರು.