ಬೆಂಗಳೂರು: ಚೀಟಿ ಕಟ್ಟಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿ(Bengaluru)ನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.
ಪುಣ್ಯ ಹಾಗೂ ಚಂದ್ರಶೇಖರ್ ಎಂಬ ದಂಪತಿಗಳು ಸ್ವಂತ ಮನೆ ತೋರಿಸಿ, ಸುಮಾರು 1.5 ಕೋಟಿಗೂ ಹೆಚ್ಚು ಹಣ ಚೀಟಿ ಹಾಕಿಸಿಕೊಂಡು ಹಲವರಿಗೆ ವಂಚಿಸಿದ್ದಾರೆ.
ಈ ಕುರಿತು ದಂಪತಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 6ಗಂಟೆಗಳ ಬಳಿಕ ಸತತ ಪ್ರಯತ್ನದೊಂದಿಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.