ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗನ್ನ ಜಾರಿ ಮಾಡೋಕೆ ಇನ್ನಿಲ್ಲದ ಕಸರತ್ತು ನಡೆಸಿದೆ. ಅಂತೂ ಇಂತೂ ನೂರೆಂಟು ವಿಘ್ನಗಳ ನಡುವೆ ಶಕ್ತಿ ಯೋಜನೆ ಜಾರಿ ಮಾಡಿರೋ ಸರ್ಕಾರ ಇದೇ ಹುಮ್ಮಸ್ಸಿನಲ್ಲಿ ಇಂದಿನಿಂದ ಗೃಹಜ್ಯೋತಿ ಜಾರಿಗೆ ಮುಂದಾಗಿದೆ. ನುಡಿದಂತೆ ನಡೆಯುವ ಸರ್ಕಾರ ಎಂದಿರುವ ಸಿಎಂ ಸಿದ್ದರಾಯಯ್ಯ ಗೃಹಜ್ಯೋತಿ ಯೋಜನೆ ಅಡಿ ಫ್ರೀ ವಿದ್ಯುತ್ ಭಾಗ್ಯಕ್ಕೆ ಕಲ್ಪಿಸೋಕೆ ಭಾರೀ ಸಿದ್ದತೆ ನಡೆಸಿದೆ.
ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಅನುಷ್ಠಾನ ಭಾರೀ ಸವಾಲು ಎನ್ನಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆ ಶಕ್ತಿ ಯೋಜನೆ ಜಾರಿ ಜನಮೆಚ್ಚಿಗೆ ಪಾತ್ರವಾಗಿರೋ ಸರ್ಕಾರ ಇದೀಗ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯನ್ನ ಜಾರಿ ಮಾಡ್ತಿದೆ.
ಹೌದು.. ನುಡಿದಂತೆ ನಡೆಯುವ ಸರ್ಕರ ಎಂದಿರುವ ಸಿದ್ದರಾಮಯ್ಯ, ಜುಲೈ 1ರಿಂದ ಗೃಹಜ್ಯೋತಿ ಗ್ಯಾರಂಟಿಯನ್ನ ಈಡೇಸಲಿದ್ದಾರೆ. ಈಗಾಗಲೇ ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹ ಜ್ಯೋತಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಇಂದಿನಿಂದ ಬಳಸುವ 200 ಯುನಿಟ್ ಒಳಗಿನ ಸರಾಸರಿ ಕರೆಂಟ್ಗೆ ಬಿಲ್ ಕಟ್ಟುವಂತಿಲ್ಲ.ಇದು ಜನರ ಸಂತಸಕ್ಕೆ ಕಾರಣವಾಗಿದೆ.
ಜುಲೈ ತಿಂಗಳ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಬರುವ ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ಹೆಸರು ಬರುವ ಸಾಧ್ಯತೆಗಳಿವೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ.ಇನ್ನು ಈ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನ ಜೂನ್ 18 ರಿಂದ ಆರಂಭ ಮಾಡಲಾಗಿದ್ದು, ಗೃಹಜ್ಯೋತಿಯ ಫಲಾನುಭವಿಗಳು ಒಟ್ಟು 2.14 ಕೋಟಿಯಷ್ಟು ಜನರಿದ್ದಾರೆ. ಕಳೆದ 12 ದಿನದಿಂದ 80 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಹಾಕಿದ್ದಾರೆ. ಇನ್ನು 1,33 00068 ಕೋಟಿಯಷ್ಟು ಜನ ನೊಂದಾಣಿಗೆ ಅರ್ಜಿ ಹಾಕಬೇಕಿದೆ.
ಒಟ್ಟಿನಲ್ಲಿ ಸರ್ವರ್ ಡೌನ್ ನಡುವೆ ಗೃಹಜ್ಯೋತಿಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೋಜನೆ ಅನುಕೂಲ ಪಡೆಯಲು ನಾ ಮುಂದು ತಾ ಮುಂದು ಮುಗಿಬೀಳ್ತಿದ್ದಾರೆ.ಆದ್ರೆ ಯೋಜನೆ ಅದೆಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.