ಮೈಸೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವ ನಿಲುವು ಸ್ವಾಗತಾರ್ಹ. ಆದರೆ ಬಡವರ ಹಸಿವಿನ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಹಿಂದುಳಿದ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮ್ ಕಿಡಿ ಕಾರಿದರು. ಅಕ್ಕಿ ದೊರಕದೆ ಹಿನ್ನಲೆಯಲ್ಲಿ 5 ಕೆಜಿ ಅಕ್ಕಿ ಜೊತೆ 5 ಅಕ್ಕಿಗೆ ತಗುಲುವ ಹಣ ಸಂದಾಯ ಮಾಡಲು ಸರ್ಕಾರ ನಿರ್ಧರಿಸಿರುವುದನ್ನ ಟೀಕಿಸಿರುವ ಪ್ರತಿಪಕ್ಷಗಳ ವಿರುದ್ದ ಕೆ.ಎಸ್ ಶಿವರಾಮ್ ಕಿಡಿಕಾರಿದರು.
ಬಿಜೆಪಿ ಬಡವರ ಹಸಿವಿನ ಮೇಲೆ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಅಕ್ಕಿ ಕೊಡಲಿಲ್ಲ ಅಂದ್ರೆ ಹಣ ನೀಡಿ ಎಂದು ನೀವೆ ಹೇಳಿದ್ರಿ ಇಂದು ಅದನ್ನು ವಿರೋಧಿಸುತ್ತಿದ್ದೀರಿ. ಅನ್ನಭಾಗ್ಯ ಯೋಜನೆ ಜಾರಿಗೊಂಡ್ರೆ ಬಿಜೆಪಿ ನೆಲೆ ಇರಲ್ಲ ಅಂತ ಭಯ ಪಟ್ಟಿದ್ದೀರಿ . ಅದಕ್ಕೆ ಹೀಗೆ ಇಲ್ಲಸಲ್ಲದ ವಾದ ಮಾಡ್ತಿದ್ದೀರಾ. ನಿಮ್ಮನ್ನು ಈಗಾಗಲೇ ಜನ ತಿರಸ್ಕರಿಸಿದ್ದಾರೆ ಹೀಗೆ ಮಾಡಿದ್ರೆ ಲೋಕಸಭೆ ಚುನಾವಣೆಯಲ್ಲೂ ಮನೆಗೆ ಕಳಿಸ್ತಾರೆ ಎಂದು ವಾಗ್ದಾಳೀ ನಡೆಸಿದರು.