ತುಮಕೂರು: ಪೆಟ್ರೋಲ್ ಬಾಟಲ್ ಹಿಡಿದು ಜಿಲ್ಲಾ ಪೊಲೀಸ್ ಕಚೇರಿ ಎದುರು ತಾಯಿ,ಸಹೋದರನೊಟ್ಟಿಗೆ ಆಗಮಿಸಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೈಡ್ರಾಮಾ ನಡೆಸಿದ ಘಟನೆ ತುಮಕೂರು ನಗರದ ಬಿಹೆಚ್ ರಸ್ತೆಯಲ್ಲಿರೋ ಎಸ್ಪಿ ಕಚೇರಿಯಲ್ಲಿ ನಡೆಸಿದೆ. ನಗರದ ಮಾಲ್ ನಲ್ಲಿ ಅಂಗಡಿಯನ್ನ ಯುವಕ ಬಾಡಿಗೆಗೆ ಪಡೆದಿದ್ದನು. ಬಾಡಿಗೆ ಕಟ್ಟದ ವಿಚಾರಕ್ಕೆ ಅಂಗಡಿ ಮಾಲೀಕ ಹಾಗೂ ಯುವಕನ ನಡುವೆ ಗಲಾಟೆ ನಡೆದು ಮಾಲೀಕ ಅಂಗಡಿ ಖಾಲಿ ಮಾಡಿಸಿದ್ದರು.
ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ಯುವಕ ನೀಡಿದ್ದ. ನಗರ ಠಾಣೆ ಪೊಲೀಸರಿಂದ ನ್ಯಾಯ ದೊರಕದ ಆರೋಪ ಹಿನ್ನೆಲೆ ಕೈಯಲ್ಲಿ ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹೊಡ್ಡಿದ್ದಾನೆ. ಎಸ್ಪಿ ಕಚೇರಿ ಸಿಬ್ಬಂದಿಗಳಿಂದ ಯುವಕನ ಮನವೊಲಿಕೆ ಮಾಡಿ ನ್ಯಾಯ ದೊರಕಿಸಿಕೊಡೋದಾಗಿ ಯುವಕನಿಗೆ ಭರವಸೆ ನೀಡಿದರು.