ಬೆಂಗಳೂರು: ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸೋಕೆ ಜುಲೈ 25ರ ವರೆಗೂ ಸಮಯವಿದೆ. ಅರ್ಜಿ ಹಾಕದವರಿಗೆ ವಿದ್ಯುತ್ ಉಚಿತ ಸಿಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಗೃಹಜ್ಯೋತಿ ಯೋಜನೆ ಕೆಲಸ ಚೆನ್ನಾಗಿ ಆಗುತ್ತಿದೆ. 86.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಜುಲೈ 1ರಿಂದಲೇ ಎಲ್ಲರಿಗೂ ಫ್ರೀ ಕರೆಂಟ್ ಸಿಗಲಿದೆ ಎಂದು ಹೇಳಿದ್ದಾರೆ.
ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದವರಗೆ ಮಾತ್ರ ಆಗಸ್ಟ್ ತಿಂಗಳಿಂದ ಕರೆಂಟ್ ಬಿಲ್ ಫ್ರೀ ಇರಲಿದೆ. ಇಲ್ಲದಿದ್ದರೆ, ಉಚಿತ ಇರಲ್ಲ. ಅರ್ಜಿ ಹಾಕೋದು ತಡ ಮಾಡಿದ್ರೆ, ಸೌಲಭ್ಯ ಸಿಗೋದು ಕೂಡ ತಡವಾಗುತ್ತೆ. ಆದ್ದರಿಂದ ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.