ಬೆಂಗಳೂರು: ಇಂದಿನಿಂದ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ ಸಂಬಂಧ ನಾವು ಮಾತು ಕೊಟ್ಟಂತೆ ಭರವಸೆ ಈಡೇರಿಸುತ್ತಿದ್ದೇವೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ತಾತ್ಕಾಲಿಕವಾಗಿ 5 ಕೆಜಿ ಅಕ್ಕಿ ಬದಲು ಬಡವರಿಗೆ ಹಣ ನೀಡುತ್ತೇವೆ. ಹೆಚ್ಚುವರಿ ಅಕ್ಕಿ ಸಿಗದ ಹಿನ್ನೆಲೆ ಬ್ಯಾಂಕ್ ಖಾತೆಗೆ ಹಣ ಹಾಕ್ತಿದ್ದೇವೆ. ಕೇಂದ್ರ ಅಕ್ಕಿ ಕೊಡದ ಕಾರಣ ವಿಧಿಯಿಲ್ಲದೆ ಹಣ ಕೊಡುತ್ತಿದ್ದೇವೆ ಎಂದರು.