ಬೆಂಗಳೂರು: ಈಗಾಗಲೇ ಮುಂಗಾರು ತಡವಾಗಿ ಬಂದಿದೆ.ಹೀಗಾಗಿ ರಾಜ್ಯದ ಬಹುತೇಕ ಜಲಾಶಯಗಳು ಖಾಲಿ ಖಾಲಿಯಾಗಿವೆ. ಬೆಂಗಳೂರಿಗೆ ನೀರುಣಿಸುತ್ತಿರೋ ಕೆಆರ್ಎಸ್ನಲ್ಲೂ ನೀರಿಲ್ಲದೇ ಡೆಡ್ಸ್ಟೋರೇಜ್ ತಲುಪುವ ಹಂತದಲ್ಲಿದೆ.. ಇದ್ರ ಬೆನ್ನಲ್ಲೇ ಬೆಂಗಳೂರಿಗೆ ಜಲಕಂಟಕ ಎದುರಾಗಿದೆ.
ನಿಮ್ಗೆಲ್ಲಾ ಗೊತ್ತೆ ಇದೆ.. ನಮ್ಮ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಎಷ್ಟರಮಟ್ಟಿಗಿದೆ ಎಂಬುದನ್ನ.. ಚೆನ್ನೈನಲ್ಲಿ ಕುಡಿಯೋ ನೀರಿಗೂ ಪರದಾಡ್ತಿದ್ದಾರೆ.. ಒಂದು ಬಿಂದಿಗೆ ನೀರಿಗಾಗಿ ಬಡಿದಾಡಿಕೊಳ್ತಿದ್ದಾರೆ.. ಇದೇ ಪರಿಸ್ಥಿತಿ ಬೆಂಗಳೂರಿಗರೂ ಸದ್ಯದಲ್ಲೇ ಅನುಭವಿಸಬೇಕಾಗುತ್ತೆ..
ಹೌದು.. ಬೆಂಗಳೂರಿನಲ್ಲಿ ಸದ್ಯದಲ್ಲೇ ಜಲಕ್ಷಾಮ ತಲೆದೋರಲಿದೆ.. ಇಡೀ ಬೆಂಗಳೂರು ಕಾವೇರಿ ನೀರನ್ನೇ ಅವಲಂಭಿಸಿದೆ.. ಈ ಬಾರಿ ಮುಂಗಾರು ಆರಂಭವಾದ್ರೂ ಕರುಣ ಕೃಪೆ ತೋರಿಲ್ಲ… ಪರಿಣಾಮ ಕೆಆರ್ಎಸ್ ಒಡಲು ಖಾಲಿಯಾಗಿದೆ.. ಕಾವೇರಿ ಕೊಳ್ಳದಲ್ಲೂ ನೀರಿಲ್ಲದೇ ಜಲಾಶಯಗಳು ಡೆಡ್ ಸ್ಟೋರೇಜ್ ತಲುಪಿದೆ.. ಈ ತಿಂಗಳಲ್ಲಿ ಮಳೆ ಬಾರದಿದ್ರೆ ಚೆನ್ನೈನಲ್ಲಿ ನೀರಿಗಾಗಿ ಪರದಾಡ್ತಿರುವಂತೆ ನಾವು ನೀವುಗಳೆಲ್ಲಾ ಹನಿ ಹನಿ ನೀರಿಗೂ ಪರದಾಡುವುದು ಗ್ಯಾರಂಟಿ..
ಸದ್ಯ ಬೆಂಗಳೂರು ಜಲಮಂಡಳಿ ಪ್ರತಿನಿತ್ಯ 145 ಕೋಟಿ ಲೀಟರ್ನಷ್ಟು ನೀರನ್ನ ಪೂರೈಕೆ ಮಾಡ್ತಿದೆ.. ಅಂದ್ರೆ ತಿಂಗಳಿಗೆ 1.5 ಟಿಎಂಸಿ ನೀರು ಬೆಂಗಳೂರಿಗೆ ಸರಬರಾಜಾಗ್ತಿದೆ.. ಸದ್ಯ ಕೆಆರ್ಎಸ್ನಲ್ಲಿ 10 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈಗ ಇರುವ ನೀರು ಕೆಲವೇ ದಿನಗಳಿಗೆ ಪೂರೈಕೆ ಮಾಡಬಹುದಾಗಿದೆ.. ಒಂದ್ವೇಳೆ ಇನ್ನೊಂದು ತಿಂಗಳಲ್ಲಿ ಸಮರ್ಪಕವಾಗಿ ಮಳೆಯಾಗದಿದ್ರೆ ಮೆಟ್ರೋ ಸಿಟಿ ಮಂದಿಯ ಸ್ಥಿತಿ ದೇವರಿಗೇ ಪ್ರೀತಿ..
ಇನ್ನು ಕೆಆರ್ಎಸ್ನ ಇರೋ ನೀರಿನಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ , ರಾಮನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಉಳಿದ ನೀರಿನಲ್ಲಿ ಬೆಂಗಳೂರಿಗೆ ಸರಬರಾಜು ಮಾಡೋದು ಕಷ್ಟಕರ. ಜಲಮಂಡಳಿ ನಗರಕ್ಕೆ 52 ವರ್ಷದಿಂದ ಕಾವೇರಿ ನೀರು ಪೂರೈಕೆ ಮಾಡಲಾಗ್ತಿದೆ. 2012 ರಲ್ಲಿ ಭೀಕರ ಜಲಕ್ಷಾಮ ಎದುರಾಗಿತ್ತು… 2015 ರಲ್ಲಿ ಕೆಆರ್ ಎಸ್ ಜಲಾಶಯ ಖಾಲಿಯಾಗಿ ಹೇಮವತಿ ಮೂಲಕ ನೀರು ಸರಬರಾಜು ಮಾಡಿಕೊಳ್ಳಲಾಗಿತ್ತು. ಈ ವರ್ಷವೂ ಮಳೆ ಬಾರದಿದ್ರೆ ಪರ್ಯಾಯ ಮಾರ್ಗ ಕಂಡುಹಿಡಿದುಕೊಳ್ಳಬೇಕಿದೆ.
ಒಟ್ಟಿನಲ್ಲಿ ರಾಜಧಾನಿಯನ್ನ ನೀರಿನ ಬವಣೆ ಸದ್ಯದಲ್ಲೇ ಕಾಡಲಿದೆ.. ಇರೋ ನೀರನ್ನ ಮಿತವಾಗಿ ಬಳಸಿದ್ರಷ್ಟೇ ಸಮಸ್ಯೆಯಿಂದ ಕೊಂಚ ಮಟ್ಟಿಗಾದ್ರೂ ತಪ್ಪಿಕೊಳ್ಳಬಹುದಾಗಿದೆ..