ಪಾಟ್ನಾ: ಜುಲೈ 3 ರಂದು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಶೀಲ್ ಮೋದಿ ಹೇಳಿದ್ದಾರೆ. ಇಂದು ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಸಮಿತಿಯು ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರನ್ನು ಹೊಂದಿರುವುದರಿಂದ, ಸಮಿತಿಯ ಸಭೆಯು ರಾಜಕೀಯೇತರವಾಗಿದೆ ಎಂದು ತಿಳಿಸಿದ್ದಾರೆ.
ಯುಸಿಸಿ ಕುರಿತ ಕಾನೂನು ಆಯೋಗದ ವರದಿ ಬಗ್ಗೆ ಜುಲೈ 3ರಂದು ಸಮಿತಿಯಲ್ಲಿ ಚರ್ಚಿಸುತ್ತೇವೆ. ಅಗತ್ಯವಿದ್ದಲ್ಲಿ ಇನ್ನೊಂದು ಸಭೆಯನ್ನು ಕರೆದು ಮತ್ತಷ್ಟು ಚರ್ಚಿಸುತ್ತೇವೆ. ಈ ವಿಚಾರದಲ್ಲಿ ಸಮಿತಿ ಸಂಪೂರ್ಣ ತಟಸ್ಥವಾಗಿದೆ ಎಂದಿದ್ದಾರೆ. ಜುಲೈ 3 ರ ಸಭೆಯಲ್ಲಿ ಯುಸಿಸಿ ಕುರಿತು ನಿಮ್ಮ ಸಲಹೆ, ಸೂಚನೆಗಳನ್ನು ತಿಳಿಸುವಂತೆ ಸದಸ್ಯರಿಗೆ ಕೋರಲಾಗುವುದು ಮತ್ತು ಅವರ ಅಭಿಪ್ರಾಯವನ್ನು ಪರಿಗಣಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.