ಬೆಂಗಳೂರು: ನಮ್ಮ ಸಮಾಜದಲ್ಲಿ ಬಡವರು ಹಾಗೂ ಶ್ರೀಮಂತರು ಎಂಬ ತಾರತಮ್ಯ ಇದೆ. ಶ್ರೀಮಂತರು ಅವರ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಜನ ಈಗ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಇರೋ ಸೌಲಭ್ಯ,
ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲೂ ಇದ್ದಾರೆ. ಆದರೆ ಜನರು ತಮ್ಮ ಮನಸ್ಸನ್ನು ಬದಲಿಸಬೇಕು. ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇಡಬೇಕು. ವೈದ್ಯರು ಕೂಡ ಅದನ್ನ ಉಳಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಹೇಳಿದರು.