ಬೆಂಗಳೂರು: ವಲಸಿಗರಿಂದಾಗಿಯೇ ಪಕ್ಷಕ್ಕೆ ಈದುರ್ಗತಿ ಬಂತು ಅನ್ನೋ ಈಶ್ವರಪ್ಪ ಸ್ಟೇಟ್’ ಮೆಂಟ್ ನಿಂದಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಬಂದಿದ್ದ ವಲಸಿಗರಿಗೆ ಮುಜುಗರ ಎದುರಾಗಿದೆ. ಯಾರೊಬ್ಬರೂ ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡದಿದ್ರೂ ಒಳಗೊಳಗೇ ಖುಗ್ಗಿ ಹೋಗಿದ್ದಾರೆ. ಅಲ್ಲಿಂದ ಇಲ್ಲಿಗೆ ಬಂದು ಇನ್ನು ಏನೇನೋ ಕೇಳ್ಬೇಕೋ. ಇನ್ನು ಏನೇನು ಅನುಭವಿಸ್ಬೇಕೋ ಅಂತ ಗೊಂದಲಕ್ಕೊಳಗಾಗಿದ್ದಾರೆ. ಪಕ್ಷದಿಂದ ಹೊರಹೋಗುವಂತೆಯೂ ಇಲ್ಲ,
ಪಕ್ಷದೊಳಗೆ ಇರೋಕೂ ಸಾಧ್ಯವಾಗ್ತಿಲ್ಲ ಅಂತಹ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕೆಲವು ಹಿರಿಯರ ಬಗ್ಗೆ ಕೋಪವಿದ್ರೂ ಒಳಗೇ ನುಂಗಿಕೊಂಡು ಸುಮ್ಮನಿದ್ದಾರೆ. ಇದ್ರ ನಡುವೆ ಇಂದು ಬಿಜೆಪಿ ಕಚೇರಿಯಲ್ಲಿಮಾತನಾಡಿದ ಈಶ್ವರಪ್ಪ ನಾನು ಆ ರೀತಿ ಹೇಳಿಯೇ ಇಲ್ಲವೆಂದು ತಿಪ್ಪೆ ಸಾರಿದ್ದಾರೆ. ಆದ್ರೆ ಅಡಿಕೆಗೆ ಹೋದ ಮಾನ ಮತ್ತೆ ಬರುತ್ತಾ ಅನ್ನೋ ಗಾದೆ ಮಾತಿನಂತೆ ಅನ್ನೋದು ಅಂದು ಬಿಟ್ಟು ಮರ್ಯಾದೆ ಹೋದ್ಮೇಲೆ ಈಗ ವಾಪಸ್ ಬರುತ್ತಾ ಅಂತ ಈಶ್ವರಪ್ಪ ವಿರುದ್ಧ ಎಲ್ಲರೂ ಕತ್ತಿ ಮಸೆಯುತ್ತಿದ್ದಾರೆ..