ಚಿಕ್ಕಮಗಳೂರು: ಮಳೆ ಬರುತ್ತೆಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಚಿಕ್ಕಮಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್(KJ George) ಹೇಳಿದ್ದಾರೆ. 15, 20 ದಿನ ಮಳೆ ಬಂದರೆ ಎಲ್ಲಾ ಜಲಾಶಯ ತುಂಬುತ್ತವೆ. ಮಳೆ ಬಾರದಿದ್ದರೆ ವಿದ್ಯುತ್ ಉತ್ಪಾದನೆಯಲ್ಲಿ ಕಷ್ಟವಾಗಬಹುದು.
ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ. ಹೈಡ್ರೋದಿಂದ ತೊಂದರೆಯಾದರೆ ಸೋಲಾರ್, ವಿಂಡ್, ಥರ್ಮಲ್ ಇದೆ. ಥರ್ಮಲ್ ಪ್ಲಾಂಟ್ ಸೇರಿ ಪಾವಗಡ ಸೋಲಾರ್ ಪ್ಲಾಂಟ್ ವೀಕ್ಷಿಸಿದ್ದೇನೆ. ಹೈಡ್ರೋದಿಂದ ತೊಂದರೆಯಾ ಗಬಹುದು, ಅಧಿಕಾರಿಗಳ ಜತೆ ಚರ್ಚಿಸಿರುವೆ. ಸೋಲಾರ್, ವಿಂಡ್, ಥರ್ಮಲ್ನಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದರು.