ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಿವದಾಸಿಮಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಜಮಖಂಡಿ ಮತ್ತು ರಬಕವಿ ಇವರ ಸಂಯುಕ್ತ ಆಶ್ರಯದಲ್ಲಿ 1679ನೇ ಮಧ್ಯವರ್ಜನ ವ್ಯವಸ್ಥಾಪನ ಶಿಬಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಜನರನ್ನು ವ್ಯಸನ ರಹಿತ ಮಾರ್ಗದಲ್ಲಿಕೊಂಡೊಯ್ಯಲು ಪ್ರೇರೇಪಿಸಿ, ದುಶ್ಚಟಮುಕ್ತ ಸಮಾಜ ನಿರ್ಮಾಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿಯ ಬಗ್ಗೆ ಪೂಜ್ಯರು ಅಭಿಮಾನ ವ್ಯಕ್ತ ಪಡಿಸಿದರು. ಆಧುನಿಕ ಸಂಕಿರ್ಣ ಜಂಜಡದ ಬದುಕಿನಲ್ಲಿ ಮನುಷ್ಯ ದುಶ್ಚಟಗಳಿಗೆ ಬಲಿಯಾಗದೆ, ಅರೋಗ್ಯಪೂರ್ಣ ಬದುಕಿಗೆ ಮುಖಮಾಡಬೇಕು. ದಿನನಿತ್ಯದಲ್ಲಿ ಧ್ಯಾನ,ಯೋಗ, ಪ್ರಾಣಾಯಾಮ, ಚಿಂತನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಷ್ಟು ವ್ಯಕ್ತಿ ವಿಕಾಸ ಮತ್ತು ಕುಟುಂಬ ವಿಕಾಸವು ಸಾಧ್ಯ ಎಂದು ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ಹೇಳಿದರು.
ಮನುಷ್ಯ ಜೀವನ ಅತೀ ಅಮೂಲ್ಯ. ಆದರೆ ಇಂದು ನಾವು ದುಶ್ಚಟಗಳ ದಾಸರಾಗಿ ಮನಸ್ಸಿನ ನೆಮ್ಮದಿ ಹಾಳುಗೆಡವಿ ಬಾಳುವಂತಾಗುತ್ತದೆ. ಅಂತವರನ್ನು ಸರಿದಾರಿಗೆ ತರುವ ಕೆಲಸ ಜನಜಾಗೃತಿ ವೇದಿಕೆ ಹಾಗೂ ಇಂತಹ ಮದ್ಯವರ್ಜನ ಶಿಬಿರಗಳ ಮುಖಾಂತರ ಮಾಡಲಾಗುತ್ತಿದೆ. ಈ ಮೂಲಕ ಅಂತಹ ಕುಟುಂಬಗಳನ್ನು ಬಲಿಷ್ಟಗೊಳಿಸಿ ಮನೋಸ್ಥೆತ್ರೖರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ. ಕೃಷ್ಣ ಟಿ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬಾಗಲಕೋಟೆ. ಅಪ್ಪಣ್ಣ ಐಗಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತೇರದಾಳ. ಹೊನ್ನಪ್ಪ ಬಿರಡಿ. ಶ್ರೀಮತಿ ಸವಿತಾ ಹೊಸೂರು. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ