ಬೆಂಗಳೂರು ;– ಸಿಎಂ ಸಿದ್ದರಾಮಯ್ಯ ಅವರು ಮುಂದಿನ ರಾಜಕೀಯ ನಡೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನರ ಪ್ರೀತಿ ವಿಶ್ವಾಸ, ಗೌರವ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಚುನಾವಣೆಯಿಂದ ನಿವೃತ್ತಿ ಅಷ್ಟೇ. ಆದ್ರೆ, ರಾಜಕೀಯ ನಿವೃತ್ತಿ ಆಗುವುದಿಲ್ಲ, ನಾನು ನಿಮ್ಮ ಪರವಾಗಿ ಹೋರಾಟ ಮಾಡೇ ಮಾಡುತ್ತೇವೆ. ಅವಕಾಶ ವಂಚಿತರ ಪರವಾಗಿ ಇರುತ್ತೇ, ಹೋರಾಟ ಮಾಡುತ್ತೇನೆ ಎಂದರು.
ಎರಡನೇ ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಜನರ ಆಶೀರ್ವಾದ ಸಿಕ್ಕಿದ್ದು, ಐದು ಗ್ಯಾರೆಂಟಿ ಜೊತೆಗೆ ಬೇರೆ ಭರವಸೆಯನ್ನ ಕೊಟ್ಟಿದ್ದೇನೆ. ರಾಜಕೀಯಕ್ಕಾಗಿ ಕೆಲವರು ಟೀಕೆ ಮಾಡಬಹುದು. 2013ರಲ್ಲಿ 6 ಭರವಸೆಯನ್ನ ಈಡೇರಿಸಿದ್ದೆವೆ. 5 ಗ್ಯಾರೆಂಟಿಗಳನ್ನ ಈ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ. ಯಾರು ಏನೇ ಹೇಳಿದರೂ ಗ್ಯಾರೆಂಟಿ ಪೂರೈಕೆ ಬೇಕೇ ಬೇಕು. 50 ರಿಂದ 60 ಸಾವಿರ ಕೋಟಿ ರೂ. ಹಣ ಗ್ಯಾರೆಂಟಿಗೆ ಖರ್ಚಾಗುತ್ತದೆ. ನಾವು ಅಧಿಕಾರಕ್ಕೆ ಬಂದು ಇವತ್ತಿಗೆ 50 ದಿನ ಆಗಿದೆ. ಐದು ಗ್ಯಾರೆಂಟಿಗಳನ್ನ ಚಾಚು ತಪ್ಪದೇ ಈ ವರ್ಷ ಜಾರಿ ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.