ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಮಂಡನೆ ಮಾಡೋದಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸಿದ್ದತೆಯಲ್ಲಿದ್ದಾರೆ. ಗ್ಯಾರಂಟಿ ಘೊಷಣೆ ಜಾರಿ ಮಾಡೋದಕ್ಕೆ ಬಜೆಟ್ ಮಂಡನೆಗೆ ಸಭೆ ಮೇಲೆ ಸಭೆ ಮಾಡಿರೋ ಸಿಎಂ ಸಿದ್ದರಾಮಯ್ಯ ಗೆ ಗ್ಯಾರಂಟಿಗೆ ಹಣ ಹೊಂದಿಸೋದು ಸವಾಲಾಗಿದೆ. ಹೀಗಾಗಿ ಪ್ರಮುಖ ಇಲಾಖೆಗಳಿಗೆ ಅನುಧಾನ ಕಡಿತ ನಿಚ್ಚಳ ಎನ್ನಲಾಗ್ತಿದೆ. ಅಧಿವೇಶನದ ಸಿದ್ಧತೆಗಳನ್ನ ಸ್ಪೀಕರ್ ಖಾದರ್ ಪರಿಶೀಲನೆ ನಡೆಸಿ ಫೈನಲ್ ಟಚ್ ನೀಡಿದ್ರು….
ಎಸ್… ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7 ರಂದು ಮಂಡಿಸಲಿರುವ ಬಜೆಟ್ನಲ್ಲಿ ಪ್ರಮುಖ ಇಲಾಖೆಗಳ ಅನುದಾನ ಕಡಿತಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಯಾಕಂದ್ರೆ ಚುನಾವಣಾ ಪೂರ್ವದಲ್ಲಿ ನೀಡಿರೋ ಗ್ಯಾರಂಟಿಗಳ ಜಾರಿ ಈ ಸರಕಾರದ ಆದ್ಯತೆಯಾಗಿದ್ದು ಇದಕ್ಕೆ ಸಾಕಷ್ಟು ಅನುಧಾನ ಬೇಕಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 50 ರಿಂದ 60 ಸಾವಿರ ಕೋಟಿ ಅನುಧಾನ ಬೇಕಾಗಿದ್ದು ಇಷ್ಟು ಹಣವನ್ನು ಹೊಂದಿಸಬೇಕಾಗಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಬೊಮ್ಮಾಯಿ ಬಜೆಟ್ ಮಂಡಿಸಿದ್ದು ಅಲ್ಲಿಂದ ಇಲ್ಲಿಯವರೆಗೆ ಹಣಕಾಸು ವಿಚಾರದಲ್ಲಿ ಬಹುದೊಡ್ಡ ಸುಧಾರಣೆ ಏನು ಆಗಿಲ್ಲ. ಹೀಗಾಗಿ ಆರ್ಥಿಕ ಸಂಪನ್ಮೂಲಗಳ ಕ್ರೋಡಿಕರಣ ರಾಜ್ಯ ಸರ್ಕಾರಕ್ಕೆ ಸವಾಲಾಗಿದ್ದು ಆರ್ಥಿಕ ಇಲಾಖೆಯ ಇಲಾಖೆಯ ಜೊತೆ ಇಂದು ಮಹತ್ವ ಸಭೆ ಮಾಡಿ ಆರ್ಥಿಕ ಸಂಪನ್ಮೂಲಗಳ ಅಂದಾಜು ಮಾಡಿದ್ದಾರೆ.
ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಈ ಹಿನ್ನಲೆ ಕಲಾಪ ನಡೆಯುವ ಸ್ಥಳ ಹಾಗೂ ರಾಜ್ಯಪಾಲರ ಸ್ವಾಗತದ ಸಿದ್ದತೆ ಬಗ್ಗೆ
ಸ್ಪೀಕರ್ ಯುಟಿ ಖಾದರ್ ಪರಿಶೀಲನೆ ನಡೆಸಿದ್ರು. ಇದೆ ವೇಳೆ ಸ್ಪೀಕರ್ ಯು.ಟಿ ಖಾದರ್ ಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದ್ರು.ಈ ಕುರಿತು ಮಾತನಾಡಿದ ಸ್ಫೀಕರ್ ಯು ಟಿ ಖಾದರ್ ಇಂದಿನಿಂದ 14ರ ವರೆಗೂ ನಮ್ಮ ಅಧಿವೇಶನ ಇರುತ್ತೆ. ರಾಜ್ಯಪಾಲರು 12 ಗಂಟೆ ಭಾಷಣ ಮಾಡುತ್ತಾರೆ ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತೆ. ಬಿಲ್ ಗಳು ಮಂಡಿಸುವುದು ಆಡಳಿತ ಪಕ್ಷ.ಯಾವೆಲ್ಲ ಬಿಲ್ ಮಂಡಿಸುತ್ತಾರೆ ಅಂತ ನೋಡಬೇಕು ಎಂದು ಹೇಳಿದರು. ಇನ್ನೂ ಗ್ಯಾರಂಟಿಗಳಿಗೆ ಹಣ ಮೀಸಲಿಡುವುದು ಅನಿವಾರ್ಯ ಆಗಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇನ್ನಿತರ ಹೊಸ ಯೋಜನೆಗಳಿಗೆ ಹೆಚ್ಚು ಅನುಧಾನ ಕೊಡಲು ಸಾಧ್ಯವಾಗುತ್ತಿಲ್ಲ.ಅಲ್ಲದೇ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಗ್ಯಾರಂಟಿಯನ್ನು ಲೋಪವಾಗದಂತೆ ಜಾರಿ ಮಾಡಬೇಕು. ಇಲ್ಲದಿದ್ರೆ ಮಾತಿಗೆ ತಪ್ಪಿದ ಆರೋಪವನ್ನು ವಿಪಕ್ಷದಿಂದ ಎದುರಿಸಿ ಲೋಕಸಭೆ ಚುನಾವಣೆಗೆ ಸಮಸ್ಯೆಯಾಗಲಿದೆ.ಹೀಗಾಗಿ ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ರಾಜೀ ಮಾಡಿಕೊಳ್ಳಲೇಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನಗರಾಭಿವೃದ್ಧಿ, ಕೃಷಿ ಇನ್ನಿತರ ಇಲಾಖೆಗಳಿಗೆ ಅನುದಾನ ಕಡಿತದ ಬಿಸಿ ತಟ್ಟುವ ಆತಂಕವಿದೆ. ಮಾನವಾಭಿವೃದ್ಧಿ ಸೂಚ್ಯಂಕವನ್ನು ಎತ್ತಿ ಹಿಡಿಯುವ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತಿತರ ಇಲಾಖೆಗಳ ಅನುದಾನವೂ ತಗ್ಗಬಹುದು.ಹಾಗೇ ನೀರಾವರಿ ಕ್ಷೇತ್ರ ಹೆಚ್ಚಿನ ಆರ್ಥಿಕ ಸಂಪನ್ಮೂಲವನ್ನು ಅಪೇಕ್ಷಿಸುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಹೆಚ್ಚು ಅನುಧಾನ ಬೇಕಿದೆ. ರಾಜ್ಯಾದ್ಯಂತ ರಸ್ತೆ ಸುಧಾರಣೆಗಳ ಅಗತ್ಯವಿದ್ದು ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ಸಮರೋಪಾದಿಯಲ್ಲಿ ಕೆಲಸವಾಗಬೇಕಿದೆ. ಆದರೆ, ನಿರೀಕ್ಷಿತ ಅನುದಾನ ದೊರಕುವ ಖಾತರಿ ಇಲ್ಲದಿರುವ ಕಾರಣ ಮೂಲಸೌಕರ್ಯ ಅಭಿವೃದ್ಧಿಯ ವೇಗ ಕುಂಠಿತಗೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಎನ್ನಲಾಗುತ್ತಿದೆ.ಆದರೆ, ಗ್ಯಾರಂಟಿ ಕಾರ್ಯಕ್ರಮದ ಜಾರಿ ಮಾಡಿ ಸರಕಾರ ಕೊಟ್ಟ ಮಾತು ಉಳಿಸಿಕೊಂಡಿರುವುದಾಗಿ ಜನರ ಮುಂದೆ ಹೋಗಲು ಸರ್ಕಾರ ನಿರ್ಧರಿಸಿದೆ.
ಒಟ್ನಲ್ಲಿ ಗ್ಯಾರಂಟಿ ಜಾರಿ ಅಂತ ಬೇಕಾಬಿಟ್ಟಿ ಸಾಲ ಮಾಡುವಂತಿಲ್ಲ. ಹಣಕಾಸು ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳೋದ್ರಲ್ಲಿ ಯಾವುದೇ ಅನುಮಾನವಿಲ್ಲಾ ಅನ್ನೋದು ಸಿಎಂ ಮನಗೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ 13 ಬಾರಿ ಬಜೆಟ್ ಮಂಡಿಸಿರೋ ಅನುಭವಿ ಸಿದ್ದರಾಮಯ್ಯ ಬಜೆಟ್ ಹೇಗಿರಲಿದೆ ಅನ್ನೊದನ್ನ ಕಾದುನೋಡಬೇಕಿದೆ.