ಬೆಂಗಳೂರು: ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಜಾಗೊಳಿಸಿದ್ದು ಸರಿಯಲ್ಲ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಚಿಮುಲ್ ಮರು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸರ್ಕಾರದ ವಿರುದ್ಧ ಡಾ.ಸುಧಾಕರ್ ಆಕ್ರೋಶ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಚಿಕ್ಕಬಳ್ಳಾಪುರ ರೈತರಿಗೆ ಪೆಟ್ಟು ನೀಡಿದೆ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಚುನಾವಣೆಯಲ್ಲಿ ಸೋತಿದ್ದೇನೆ ಆದ್ರೆ ಸತ್ತಿಲ್ಲ. ಟಾರ್ಗೆಟ್ ಮಾಡಿಕೊಂಡು ಏನು ತನಿಖೆ ಮಾಡಿಸ್ತಾರೋ ಮಾಡಿಸಲಿ. ಆಕ್ಸಿಜನ್ ದುರಂತ ತನಿಖೆಯಲ್ಲಿ ಯಾರು ಟಾರ್ಗೆಟ್ ಎಂಬುದು ಗೊತ್ತು. ಮುಂದಿನ 6 ತಿಂಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲ್ಲ ಎಂದರು.