ಬೆಂಗಳೂರು: ವಿಧಾನಸಭೆ, ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇಂದು ಅಥವಾ ನಾಳೆ ವಿಪಕ್ಷ ನಾಯಕರ ಆಯ್ಕೆ ಆಗಲಿದೆ.
ನನ್ನ ಪ್ರಕಾರ ವೀಕ್ಷಕರು ಈಗಾಗಲೇ ಬಂದಿದ್ದಾರೆ. ನಾಳೆಗೆ ಎಲ್ಲಾವೂ ಸರಿಯಾಗುತ್ತೆ, ಯಾವುದೇ ಗೊಂದಲ ಇಲ್ಲ. ರಾಜ್ಯಪಾಲರ ಭಾಷಣ ನೋಡಿಲ್ಲ, ನೋಡಿದ ಬಳಿಕ ಮಾತಾಡುತ್ತೇನೆ ಎಂದರು.
ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ, ಅದು ಯಾವುದೋ ಸಣ್ಣ ಹುದ್ದೆ ಇರಬೇಕು ಅದಕ್ಕೆ 30 ಲಕ್ಷ ಕೇಳಿದ್ದಾರೆ,ಅಲ್ಲಿ ಕೋಟ್ಯಾಂತರ ರೂಪಾಯಿ ಕೇಳುತ್ತಿದ್ದಾರೆ ಎಂದರು.