ಬೀದರ್: ಬಸವಕಲ್ಯಾಣ ನಗರದ ಹಿರೇಮಠ ಕಾಲೋನಿಯಲ್ಲಿ ಗೋಹತ್ಯೆ ಪ್ರಕರಣ ಬಯಲಿಗೆ ಬಂದಿದ್ದು, ಇಬ್ಬರ ವಿರುದ್ಧ ದೂರು ದಾಖಲಾದ ಘಟನೆ ನಡೆದಿದೆ
ನಗರದ ಹಿರೇಮಠ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಬಗೋವು ಹತ್ಯೆ ಮಾಡಲಾಗಿದೆ ಎಂದು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯ ಬೆನಲ್ಲಿ ಯೇ ಪೊಲೀಸರು ಪಶು ವೈದ್ಯಾಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಬಸವಕಲ್ಯಾಣ ಪಿ ಎಸ ಐ ರೇಣುಕಾ ಅವರ ದೂರಿನ ಮೇರೆಗೆ ನಗರದ ಠಾಣೆಯಲ್ಲಿ ಹಿರೇಮಠ ಕಾಲೋನಿಯ ನಿವಾಸಿ ಇನಾಮುಲ್ಲಾ ಖಾನ.ಹಾಗೂ ಮಝರ್ ಖಾನ್ ಎಂಬುವರ ವಿರುದ್ಧ ಕರ್ನಾಟಕ ಜಾನುವಾರು ಹತ್ಯ ತಡೆ ಮತ್ತು ಸಂರಕ್ಷಣೆ ಕಾಯ್ದೆ 2020ರ ಅಡಿ ದೂರ ದಾಖಲಿಸಿ ವಿಚಾರಣೆ ನಡೆಸಲಾಗಿದೆ.