ಬೆಂಗಳೂರು ;- ಭ್ರಷ್ಟಾಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರವಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದು ಯಾವುದೋ ಸಣ್ಣ ಹುದ್ದೆ ಇರಬೇಕು. ಅದಕ್ಕೆ 30 ಲಕ್ಷ ಕೇಳಿದ್ದಾರೆ, ಅಲ್ಲಿ ಕೋಟ್ಯಂತರ ರೂಪಾಯಿ ಕೇಳುತ್ತಿದ್ದಾರೆ.
ಈ ಹಿಂದೆ ನಮ್ಮ ವಿರುದ್ಧ ಆರೋಪ ಮಾಡಿದಾಗ ಅದಕ್ಕೆ ಎಲ್ಲದಕ್ಕೂ ದಾಖಲೆ ಕೊಡೋಕೆ ಆಗುತ್ತಾ ಅಂತಿದ್ರು. ಈಗ ಯಾಕೆ ದಾಖಲೆ ಕೇಳ್ತಾ ಇದ್ದಾರೆ. 40%, 40% ಅಂತಿದ್ರಲ್ವಾ, ಈಗ 40% ಇಲ್ವಲ್ಲ. ಈಗ ಕೆಲಸ ಮಾಡಿ ತೋರಿಸಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರಿ ಪ್ರಾಮಾಣಿಕತೆಯ ಬಗ್ಗೆ ಮಾತಾನಾಡುತ್ತ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಾಗ ಮಾತ್ರ ಈಗ ಹೊರಗಡೆ ಬರಲು ಸಾಧ್ಯ. ಎಲ್ಲಾ ಕಾಮಗಾರಿಗಳಲ್ಲಿ 40% ರೆಡ್ಯೂಸ್ ಮಾಡಿ ಕಾಮಗಾರಿ ಮಾಡಿ. ಕಾಂಟ್ರ್ಯಾಕ್ಟರ್ ಕೂಡ ಅದೇ ದರಕ್ಕೆ ಒಪ್ಪಿಕೊಳ್ಳಬೇಕು. ಈಗ ದುಡ್ಡು ಕಡಿಮೆಯಾಗಬೇಕಲ್ಲ. ನಮ್ಮಲ್ಲಿ 40% ಇತ್ತು ಅಂತಾ ಆರೋಪ ಮಾಡಿದ್ರಲ್ಲ. ಈಗ ಕಡಿಮೆ ಆಗಬೇಕು ಎಂದು ಸರ್ಕಾರಕ್ಕೆ ಬೊಮ್ಮಾಯಿ ಕುಟುಕಿದರು.