ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ತನ್ನ ಕಹಿ ಗುಣ ಲಕ್ಷಣದಿಂದಲೇ ಜಗತ್ಪ್ರಸಿದ್ಧಿ ಪಡೆದಿರುವ ಮುಳ್ಳು ಮೈ ಹೊಂದಿರುವ ತರಕಾರಿ ಈ ಹಾಗಲ ಕಾಯಿ.
ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.
ಹಾಗಲಕಾಯಿ ರಸವು ತನ್ನಲ್ಲಿ ಫೋಲೇಟ್, ಜಿಂಕ್, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ ಎ ‘ ಮತ್ತು ವಿಟಮಿನ್ ‘ ಸಿ ‘ ನಂತಹ ಹಲವಾರು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಆಹಾರದಲ್ಲಿ ನಾರಿನ ಅಂಶದ ಅತ್ಯುತ್ತಮ ಮೂಲ ಎಂದು ಗುರುತಿಸಿಕೊಂಡಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ಮಟ್ಟವನ್ನು ಇತರ ಯಾವುದೇ ತರಕಾರಿ ಮತ್ತು ಹಣ್ಣುಗಳಿಗಿಂತ ಎರಡು ಪಟ್ಟು ಹೆಚ್ಚಾಗಿ ಹೊಂದಿರುತ್ತದೆ
ಕರೇಲಾದಲ್ಲಿ ಮಧುಮೇಹ ವಿರೋಧಿ ಗುಣ ಲಕ್ಷಣಗಳೊಂದಿಗೆ ಕನಿಷ್ಠ ಇನ್ನೂ ಮೂರು ಸಕ್ರಿಯ ಪದಾರ್ಥಗಳಿವೆ, ಇದರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಕಡಿಮೆಗೊಳಿಸುವ ಪರಿಣಾಮವನ್ನು ಹೊಂದಿರುವ ಚರಂಟಿನ್, ವೈಸಿನ್ ಮತ್ತು ಪಾಲಿಪೆಪ್ಟೈಡ್-ಪಿ ಎಂದು ಕರೆಯಲ್ಪಡುವ ಇನ್ಸುಲಿನ್ ತರಹದ ಸಂಯುಕ್ತವಿದೆ. ಟೈಪ್ – 2 ಡಯಾಬಿಟಿಸ್ ಸೇರಿದಂತೆ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಈ ವಸ್ತುಗಳು ಸಹಾಯ ಮಾಡುತ್ತವೆ.
ಟೈಪ್ – 2 ಡಯಾಬಿಟಿಸ್ ಎಂದರೆ ದೇಹವು ತನ್ನ ಸರಿಯಾದ ಕಾರ್ಯ ನಿರ್ವಹಣೆಗೆ ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ ಅಥವಾ ದೇಹದ ಜೀವ ಕೋಶಗಳು ಉತ್ಪತ್ತಿಯಾಗುವ ಇನ್ಸುಲಿನ್ ಗೆ ಅಷ್ಟಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ದೇಹವು ಕಡಿಮೆ ಪ್ರಮಾಣದಲ್ಲಿ ಇನ್ಸುಲಿನ್ ಹೊಂದಿದ್ದರೆ ಅಥವಾ ಸಂಪೂರ್ಣವಾಗಿ ಇನ್ಸುಲಿನ್ ಹೊಂದಿಲ್ಲದಿದ್ದರೆ ಅದನ್ನು ಟೈಪ್ – 1 ಮಧುಮೇಹ ಎಂದು ಕರೆಯಲಾಗುತ್ತದೆ.
ಅಧ್ಯಯನದ ಪ್ರಕಾರ, 4 ವಾರಗಳ ಕ್ಲಿನಿಕಲ್ ಪ್ರಯೋಗವು ನಿಯಮಿತವಾಗಿ ತೆಗೆದುಕೊಂಡಾಗ 2000 ಮಿಲಿ ಗ್ರಾಂ ನಷ್ಟು ಕಹಿ ಹಾಗಲಕಾಯಿ ಟೈಪ್ -2 ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತೋರಿಸಿ ಕೊಟ್ಟಿದೆ. ಅಲ್ಲದೆ, ಕರೇಲಾದ ಸಸ್ಯ ಆಧಾರಿತ ಇನ್ಸುಲಿನ್ ಅಂಶ ಟೈಪ್ – 1 ಮಧುಮೇಹ ರೋಗಿಗಳಿಗೂ ಸಹಾಯ ಮಾಡುತ್ತದೆ.
ಲಿವರ್ ಅಥವಾ ಯಕೃತ್ತನ್ನು ಶುದ್ಧಗೊಳಿಸುತ್ತದೆ
ಕಹಿ ಹಾಗಲಕಾಯಿಯ ರಸವು ನಿಮ್ಮ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣ ಪಡಿಸುತ್ತದೆ. ಕಹಿ ಕಲ್ಲಂಗಡಿ ರಸವು ಯಕೃತ್ತಿನಲ್ಲಿರುವ ಕಿಣ್ವಗಳ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಬಲಪಡಿಸುವ ಮೂಲಕ ಭವಿಷ್ಯದಲ್ಲಿ ನಾನಾ ಕಾರಣಗಳಿಂದ ಎದುರಾಗುವ ಲಿವರ್ ಅಥವಾ ಯಕೃತ್ತಿನ ವೈಫಲ್ಯವನ್ನು ತಡೆಯುತ್ತದೆ ಎಂದು ಅಧ್ಯಯನವು ಕಂಡು ಹಿಡಿದು ಸಾಬೀತು ಪಡಿಸಿದೆ.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕಹಿ ಹಾಗಲಕಾಯಿಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತವೆ.ನಮ್ಮ ಚರ್ಮದ ಅಲರ್ಜಿಯನ್ನು ಗುಣ ಪಡಿಸುತ್ತದೆ ಮತ್ತು ದೃಷ್ಟಿಯ ದೋಷವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ
ಕರೇಲಾ ಅಥವಾ ಕಹಿ ಹಾಗಲಕಾಯಿಯಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಜೀವ ಸತ್ವಗಳು, ಖನಿಜಗಳು ಮತ್ತು ಆಹಾರದ ನಾರಿನ ಅಂಶಗಳಿವೆ. ಆಹಾರದಲ್ಲಿನ ಫೈಬರ್ ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕಣ್ಣುಗಳಿಗೆ ಒಳ್ಳೆಯದು
ಎಲ್ಲರೂ ಹೇಳುವುದು ಹಾಗಲಕಾಯಿ ತುಂಬಾ ಉಷ್ಣ ಸ್ವಭಾವ ಹೊಂದಿದ ತರಕಾರಿ. ಹೀಗಾಗಿ ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದೆ ಎಂದು. ಆದರೆ ಇದು ಜನರಲ್ಲಿರುವ ತಪ್ಪು ಕಲ್ಪನೆ. ಪ್ರತಿ ದಿನ ಕರೇಲಾ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ಪೊರೆಗಳಂತಹ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ,