ಬೆಂಗಳೂರು: ನ್ಯೂಯಾರ್ಕ್ ನ ಪೌರಾಣಿಕ ಕಾರ್ನೆಗೀ ಹಾಲ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಬೆಂಗಳೂರಿನ ರಶ್ಮಿ ಶಶಿ ಅವರ 30 ವಿಧ್ಯಾರ್ಥಿಗಳ ನೃತ್ಯ ನೆರೆದಿದ್ದ ಕಲಾರಸಿಕರ ಮನಸೂರೆಗೊಳ್ಳುವಂತೆ ಮಾಡಿದೆ.
ಕಾರ್ನೆಗೀ ಹಾಲ್ ನಲ್ಲಿ ನಡೆದ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ 10 ಆಯ್ದ ನೃತ್ಯ ಶಾಲೆಗಳು ಪಾಲ್ಗೊಂಡಿದ್ದು, ಬೆಂಗಳೂರು ಮೂಲದ ಗುರು ರಶ್ಮಿಯವರ ತಂಡ ಭಾರತೀಯ ಶಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸಿತು.
ಅಮೆರಿಕಾದ ಪ್ರಸಿದ್ಧ ಫೆಸ್ಟಿವಲ್ ನಲ್ಲಿ ಒಂದಾಗಿರುವ ನ್ಯೂಯಾರ್ಕ್ ಕಾರ್ನೆಗೀ ಡ್ಯಾನ್ಸ್ ಫೆಸ್ಟಿವಲ್ ಗೆ ಪ್ರಪಂಚದಾದ್ಯಂತ ಅತ್ಯುತ್ತಮ ಕಲಾವಿದರನ್ನ ಆಯೋಜಿಸಲಾಗಿತ್ತು. ಫೆಸ್ಟಿವಲ್ ಗೆ ಉತ್ತರ ಅಮೆರಿಕಾದ್ಯಂತ ಕೇವಲ ಹತ್ತು ಪ್ರತಿಷ್ಠಿತ ನೃತ್ಯ ಶಾಲೆಗಳನ್ನು ಆಯ್ಕೆಯಾಗಿದ್ದವು. ಈ ಪೌರಾಣಿಕ ವಿಶ್ವ ವೇದಿಕೆಯಲ್ಲಿ ಗುರು ರಶ್ಮಿ ಅವರ ವಿಧ್ಯಾರ್ಥಿಗಳ ತಂಡ ಭಾರತದ ಪರಂಪರೆಯ ಸಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸುವುದರೊಂದಿಗೆ ದೇಶದ ಗೌರವ ಹೆಚ್ಚಿಸಿದರು.
ಟೆಕ್ಸಾಸ್ ಲ್ಯಾಂಡ್ನಲ್ಲಿರುವ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ನ ಕಲಾತ್ಮಕ ನಿರ್ದೇಶಕರಾಗಿರುವ ಗುರು ರಶ್ಮಿ ಶಶಿಯವರು ಬೆಂಗಳೂರಿನವರು. ಭರತನಾಟ್ಯ, ಜಾನಪದ ಮತ್ತು ಭಾರತದ ಇತರ ಸಮಕಾಲೀನ ನೃತ್ಯಗಳ ಕಲಾಕ್ಷೇತ್ರ ಶೈಲಿಯನ್ನು ಕಲಿಸುವಲ್ಲಿ ಗುರು ರಶ್ಮಿ ಪರಿಣತಿ ಹೊಂದಿದ್ದಾರೆ.