ಮೈಸೂರು ;- ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದ ಮೈಸೂರಿನ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
20 ವರ್ಷದ ಎಫ್ರಾಹಿಂ ಮೃತ ದುರ್ದೈವಿ. ಹಕ್ಕಿಪಿಕ್ಕಿ ಸಮುದಾಯದ ಎಫ್ರಾಹಿಂ, ಅಮಿತ್ ಮತ್ತು ಮಂಜುಳ ದಂಪತಿಯ ಪುತ್ರ.
ಎಫ್ರಾಹಿಂ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಬಗ್ಗೆ ತಂದೆ-ತಾಯಿ ಜೊತೆ ದೂರವಾಣಿಯಲ್ಲಿಯೂ ಮಾತನಾಡಿದ್ದ. ಆತನನ್ನು ಜೊತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಾ ಎಂಬ ಆತಂಕದಲ್ಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸುವಂತೆ ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ