ಬೆಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿರೋಧ ಪಕ್ಷ ನಾಯಕನಿಲ್ದೇ ಜಂಟಿ ಅಧಿವೇಶನ ಆರಂಭವಾಗಿದೆ.ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡುವಲ್ಲಿ ಬಿಜೆಪಿ ಸೋತಿದೆ.ಬಿಜೆಪಿಯಲ್ಲಿರುವ ಗುಂಪುಗಾರಿಕೆ ಇರೋದು ಇದ್ರಿಂದ ಗೊತ್ತಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಇಂದು ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಆರಂಭಗೊಂಡಿದೆ.. ಮೊದಲ ದಿನ ರಾಜ್ಯಪಾಲರು ಎರಡು ಸದನ ಉದ್ದೇಶಿಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಭಾಷಣ ಮಾಡಿದ್ರು..ಆದ್ರೆ ಅದಕ್ಕೂ ವಿಶೇಷ ಅಂದರೆ ಬಿಜೆಪಿ ಪಕ್ಷದ್ದು. ಯಾವುದೇ ಅಧಿಕೃತ ವಿಪಕ್ಷನಾಯಕನಿಲ್ಲದೆ ಬಿಜೆಪಿ ಶಾಸಕರು ಅಧಿವೇಶನಕ್ಕೆ ಆಗಮಿಸಿ ರಾಜ್ಯಪಾಲರ ಭಾಷಣ ಕೇಳಿದ್ರು.ಅಧಿವೇಶನಕ್ಕೂ ಮುನ್ನ ವಿಪಕ್ಷ ನಾಯಕನನ್ನ ಆಯ್ಕೆ ಮಾಡೋದು ವಾಡಿಕೆ.ಆದ್ರೆ,ಅಧಿವೇಶನ ಆರಂಭವಾದ್ರೂ ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಲು ಬಿಜೆಪಿ ಆಸಕ್ತಿ ತೋರಿಸಿಲ್ಲ.ಇದ್ರಿಂದ ಬಿಜೆಪಿಯಲ್ಲಿರುವ ಆಂತರಿಕ ಕಚ್ಚಾಟ ಮತ್ತೆ ಬಯಲಾಗಿದೆ.
ಇನ್ನು ವೀಕ್ಷಕರ ಸಮ್ಮುಖದಲ್ಲಿ ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕ ಆಯ್ಕೆ ಮಾಡಲು ಬಿಜೆಪಿ ಮುಂದಾಗಿದೆ.ನಾಳೆ ಬೆಳಿಗ್ಗೆ ಶಾಸಕರ ಅಭಿಪ್ರಾಯ ಪಡೆದ ಬಳಿಕ,ವಿಪಕ್ಷ ನಾಯಕನನ್ನ ಆಯ್ಕೆ ಮಾಡಲು ಬಿಜೆಪಿ ನಿರ್ಧಾರಿಸಿದೆ.ನಾಳೆ ಸಂಜೆಯೊಳಗ್ಗೆ ವಿಪಕ್ಷ ನಾಯಕನನ್ನ ಆಯ್ಕೆ ಮಾಡ್ತೀವಿ ಎಂದು ಮಾಜಿ ಸಿಎಂ ಬಿಎಸ್ವೈ ಹಾಗೂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಿದ ಬಿಜೆಪಿ ನಿಲುವುಗೆ ಕಾಂಗ್ರೆಸ್ ಲೇವಡಿ ಮಾಡಿದೆ.ಸಿಎಂ ಸ್ಥಾನಕ್ಕೆ 2500 ಕೋಟಿಗೆ ಮಾರಾಟ ಮಾಡಲಾಗಿತ್ತು.ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಎಷ್ಟಕ್ಕೆ ಬಿಕರಿಯಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಲೇವಡಿ ಮಾಡಿದೆ.ಇನ್ನು ಅತೀ ಹೆಚ್ಚು ಅಶಿಸ್ತು ಇರೋದು ಬಿಜೆಪಿಯಲ್ಲಿ.ಬಿಜೆಪಿ ಗುಂಪುಗಾರಿಕೆ ಇರೋದು ಇದ್ರಿಂದ ಗೊತ್ತಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಸದನದಲ್ಲಿ ಮತ್ತು ಸದನದ ಹೊರಗಡೆ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸಿದೆ.. ಆದ್ರೆ ಅಧಿಕೃತ ನಾಯಕನಿಲ್ಲದ ಬಿಜೆಪಿಗೆ ಸದನದಲ್ಲಿ ನಾಳೆ ಮಾಜಿ ಸಿಎಂ ಬಸವರಾಜ ಬೊಮ್ಮಯಿ ನೇತೃತ್ವವಹಿಸಲಿದ್ದಾರೆ.. ಹೀಗಾಗಿ ನಾಳೆ ಕಾಂಗ್ರೆಸ್ ಗ್ಯಾರಂಟಿ ವಿಚಾರವಾಗಿ ಬಿಜೆಪಿ ಪಡೆ ಹೋರಾಟಕ್ಕೆ ಇಳಿಯುತ್ತಿದ್ದು ಸದನದಲ್ಲಿ ಬಸವರಾಜ ಬೊಮ್ಮಯಿ ಕೈ ವಿರುದ್ದ ತೊಡೆ ತಟ್ಟಲಿದ್ದಾರೆ. ಸದನದ ಹೊರಗೆ ಘಟಾನುಘಟಿ ನಾಯಕರು ನಾಳೆ ಫ್ರೀಡಂ ಪಾರ್ಕ್ ನಲ್ಲಿ ಹೊರಾಟಕ್ಕೆ ಇಳಿಯಲಿದ್ದಾರೆ.ಇದರ ನೇತೃತ್ವವನ್ನ ರಾಜ್ಯ ಬಿಜೆಪಿಯ ಭೀಷ್ಮ ಯಡಿಯೂರಪ್ಪ ವಹಿಸಲಿದ್ದಾರೆ.
ಅಸೆಂಬ್ಲಿ ಅಧಿವೇಶನದಲ್ಲಿ ಗ್ಯಾರಂಟಿಯ ಗುಡುಗು ನಡೆದ್ರೆ, ಹೊರಗಡೆ ರಾಜಾಹುಲಿಯ ಘರ್ಜನೆ ಜೋರಾಗಿ ಕೇಳಿಲಿದೆ.ಇದ್ರ ಮಧ್ಯೆ ಅಧಿವೇಶನ ಆರಂಭವಾದ್ರೂ ವಿಪಕ್ಷ ನಾಯಕನನ್ನ ಆಯ್ಕೆ ಮಾಡದೇ ಇರೋದು ಬಿಜೆಪಿಯಲ್ಲಿರುವ ಆಂತರಿಕ ಸಂಘರ್ಷ ಮತ್ತ ಬೀದಿಗೆ ಬಂದಿದೆ.