ಶಿವಮೊಗ್ಗ: ಬೆಂಗಳೂರು ಕ್ರೆಂ ಲೋಕವನ್ನು ಮೀರಿಸುತ್ತಿದೆ ಶಿವಮೊಗ್ಗದ ಅಪರಾಧ ಜಗತ್ತು. ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲಿ ಅತೀ ಹೆಚ್ಚು ಪೊಲೀಸ್ ಪೈರಿಂಗ್ ಗಳು ಆಗಿರುವುದು ಶಿವಮೊಗ್ಗ ಜಿಲ್ಲೆಯಲ್ಲೇ ಎಂಬುದು ಗಮನಾರ್ಹ. ಅಲ್ಲದೆ ರೌಡಿಗಳ ಪಟ್ಟಿ ದೊಡ್ಡದಿರುವುದು ಕೂಡ ಶಿವಮೊಗ್ಗ. ಅತೀ ಹೆಚ್ಚು ಎಪ್.ಐ.ಆರ್ ಆಗುವ ಜಿಲ್ಲೆ ಕೂಡ ಶಿವಮೊಗ್ಗ. ಶಿವಮೊಗ್ಗದ ರೌಡಿಗಳಿಗೆ ಪೊಲೀಸರ ಭಯವಿಲ್ಲವೇ…ಹೀಗೊಂದು ಅನುಮಾನ ಮೂಡಲು ಕಾರಣವೂ ಇದೆ.
ಶಿವಮೊಗ್ಗ ಜಿಲ್ಲೆಯ ಪಾತಕ ಲೋಕಕ್ಕೆ ತನ್ನದೇ ಆದ ಇತಿಹಾಸವಿದೆ. 80 ದಶಕದಲ್ಲಿ ಎದುರಾಳಿಗಳಾಗಿ ಬಡಿದಾಡಿಕೊಳ್ಳುತ್ತಿದ್ದ ರೌಡಿಗಳು ಈಗ ಅಂಡ್ಯಾಡ್ಯ್ಡ್ ವರ್ಷನ್ ಗೆ ಅಪ್ ಡೇಟ್ ಆಗಿದ್ದಾರೆ. ಹೈಟೆಕ್ ತಂತ್ರಜ್ಞಾನ ಬಳಸಿಕೊಂಡಿರುವ ರೌಡಿಗಳಿಗೆ ಹೆಡೆಮುರಿ ಕಟ್ಟಲು ಪೊಲೀಸರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ರೌಡಿಗಳ ಕಾಲಿಗೆ ಗುಂಡೇಟು ಬಿದ್ದರೂ ಅಪರಾಧ ಜಗತ್ತು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇತ್ತಿಚ್ಚಿನ ಎಲ್ಲಾ ಪೊಲೀಸ್ ಫೈರಿಂಗ್ ಕೇಸ್ ಗಳಲ್ಲಿ ಕೂಡ ಪೊಲೀಸ್ ಸಿಬ್ಬಂದಿಗಳು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು
ಶಿವಮೊಗ್ಗದ ರೌಡಿಗಳಿಗೆ ಪೊಲೀಸರ ಭಯವಿಲ್ಲ ಎಂಬುದನ್ನು ಸಾಭೀತು ಪಡಿಸಿದಂತಾಗುವುದಿಲ್ಲವೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ದಕ್ಷ ಅಧಿಕಾರಿಗಳು ಶಿವಮೊಗ್ಗ ನಗರದಲ್ಲಿದ್ದಾರೆ. ಡಿಎಸ್ಪಿ ಬಾಲರಾಜ್ ಹೆಸರು ಕೇಳಿದರೆ. ನಡುಗುವ ರೌಡಿಗಳಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಪ್ರತಿ ಪೊಲೀಸ್ ದಾಳಿಯಲ್ಲೂ ಎದುರಾಳಿ ರೌಡಿಗಳು ಪೊಲೀಸರ ಮೇಲೆ ಪ್ರತಿದಾಳಿ ನಡೆಸಿರುವುದಕ್ಕೆ ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಾಗಿರುವುದೇ ಸಾಕ್ಷಿಕರಿಸುತ್ತೆ. ನೆನ್ನೆ ರೌಡಿಶೀಟರ್ ಸೈಫು ನನ್ನು ಪ್ರಕರಣವೊಂದರಲ್ಲಿ ಬಂಧಿಸಲು ಹೋದಾಗ ಆತ ಪ್ರತಿದಾಳಿ ಮಾಡಿದ್ದಾನೆ.
ಸೈಫು ಕಾಲಿಗೆ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು, ಗುಂಡೇಟು ಹೊಡೆದಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಬಂಧನಕ್ಕೆ ತೆರಳಿದ್ದ ವೇಳೆ, ಪೊಲೀಸರ ಮೇಲೆ ಸೈಫು ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ನಾಗರಾಜ್ ಮೇಲೆ ಹಲ್ಲೆ ಮಾಡಿ, ರೌಡಿ ಶೀಟರ್ ಸೈಫು, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ನವೀನ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ, ಎಚ್ಚರಿಕೆ ಧಿಕ್ಕರಿಸಿ ಪರಾರಿಯಾಗಲು ಯತ್ನಿಸಿದ ರೌಡಿ ಸೈಫು ಕಾಲಿಗೆ ಫೈರಿಂಗ್ ಮಾಡಲಾಗಿದೆ.
ಪೊಲೀಸರು ರೌಡಿಯೊಬ್ಬನನ್ನು ಹಿಡಿಯಲು ಹೋದಾಗ ಖಾಕಿಗೆ ಶರಣಾಗಬೇಕಾದ ರೌಡಿ, ಭಯವಿಲ್ಲದೆ ಪೊಲೀಸರ ಮೇಲೆ ಪ್ರತಿದಾಳಿ ಮಾಡುತ್ತಾನೆ. ಪ್ರಾಣ ರಕ್ಷಣೆಗಾಗಿ ಪೊಲೀಸರು ರೌಡಿ ಕಾಲಿಗೆ ಗುಂಡೇಟು ಹೊಡೆಯುತ್ತಾರೆ. ಇತ್ತ ರೌಡಿ ಕಾಲಿಗೆ ಗುಂಡೇಟು ಬಿದ್ದರೆ ಅತ್ತ ಪೊಲೀಸ್ ಸಿಬ್ಬಂದಿ ಯಾರಾದರೂ ಒಬ್ಬರು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಈವರೆಗಿನ ಎಲ್ಲಾ ಪೈರಿಂಗ್ ಕೇಸ್ ಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಹಲ್ಲೆಗೊಳಗಾಗಿದ್ದಾರೆ. ಮಾರ್ಕೇಟ್ ಲೋಕಿ, ಸೈನಾದಿ ಲಕ್ಷಣ ಮಧು ಯಿಂದ ಹಿಡಿದು, ಸೈಫು ವರೆಗೆ ನಡೆದ ಎಲ್ಲಾ ಗುಂಡಿನ ದಾಳಿಗಳಲ್ಲೂ ಪೊಲೀಸ್ ಸಿಬ್ಬಂದಿಗಳು ಹಲ್ಲೆ ಗೊಳಗಾಗಿದ್ದಾರೆ.
ಜೂನ್ 3, 2022 ರಂದು ಶಿವಮೊಗ್ಗದ ಅನುಪಿನಕಟ್ಟೆಯ ಬಳಿ ದರೋಡೆದೆ ಹೊಂಚು ಹಾಕುತ್ತಿದ್ದ ರೌಡಿ ಅರ್ಷದ್ ಖಾನ್ ಬಗ್ಗೆ ತುಂಗಾ ನಗರ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ರೌಡಿ ಬಂಧನಕ್ಕೆ ಮುಂದಾಗ ಇನ್ ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡದ ಮೇಲೆ ಅರ್ಷದ್ ಖಾನ್ ಪ್ರತಿದಾಳಿಗೆ ಮುಂದಾಗಿದ್ದ.ಆಗ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದರು.ಆಗ ಇನ್ ಸ್ಪೆಕ್ಟರ್ ಮಂಜುನಾಥ್ ಅರ್ಷದ್ ಕಾಲಿಗೆ ಗುಂಡು ಹಾರಿಸಿದ್ರು.
ಜೂನ್ 21 2022 ರಂದು ದರೋಡೆ ಪ್ರಕರಣದ ಪ್ರಮುಖ ಆರೋಪಿ ಶಾಹಿದ್ ಖುರೇಷಿ ತಲೆ ಮೆರೆಸಿಕೊಂಡು ಓಡಾಡುತ್ತಿದ್ದ ಶಿವಮೊಗ್ಗದ ಕೆ.ಆರ್ ಪುರಂ ಬಳಿ ಖರೇಷಿ ಇರುವ ಖಚಿತ ಮಾಹಿತಿ ಮೇರೆಗೆ,ಕ್ರೈಂ ಪೊಲೀಸ್ ಗುರುನಾಯಕ್ ಮತ್ತು ರಮೇಶ್ ತೆರಳಿದ್ದರು. ಆಗ ಖುರೇಷಿ ರಮೇಶ್ ರವರ ಕೈಗೆ ಹಾಗು ಗುರುನಾಯಕ್ ರವರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ. ಕೆಲವೇ ಹೊತ್ತಿನಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಶಾಹಿದ್ ಖುರೇಷಿ ಇರುವ ಮಾಹಿತಿ ಲಭ್ಯವಾಗುತ್ತದ್ದಂತೆ ಅಲರ್ಟ್ ಆದ ಪೊಲೀಸರು ಪುನಃ ಚಾಕುವಿನಿಂದ ದಾಳಿಗೆ ಮಾಡಲು ಮುಂದಾಗಿದ್ದ. ಆಗ ಆತನ ಬಲಗಾಲಿಗೆ ಹುಂಡು ಹಾರಿಸಿ ಬಂಧಿಸಲಾಗಿತ್ತು.
ಆಗಸ್ಟ್ 15, 2022 ರಂದು ಗಾಂಧಿ ಬಜಾರ್ ತರಕಾರಿ ಮಾರುಕಟ್ಟೆ ಬಳಿ ಪ್ರೇಮ್ ಸಿಂಗ್ (20) ಎಂಬ ಯುವಕನನ್ನು ಚಾಕು ಇರಿದು ಕೊಲೆಗೆ ಯತ್ನಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾರನೇ ದಿನ ಅಂದರೆ 16-08-22 ರಂದು ಮಾರ್ನಮಿ ಬೈಲಿನ ಮೊಹಮ್ಮದ್ ಝಬಿ ಎಂಬಾತನನ್ನು ಬಂಧಿಸಲು ತೆರಳಿದ್ದರು. ಎನ್.ಟಿ ರಸ್ತೆಯ ಫಲಕ್ ಪ್ಯಾಲೇಸ್ ಬಳಿ ಝಬಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ.ಆಗ ವಿನೋಬ ನಗರ ಎಸ್ಸೈ ಮಂಜುನಾಥ್ ಕುರಿಯವರು ಝಬಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ರು.
26 ಅಕ್ಟೋಬರ್ 2022 ರಂದು ಖಾಸಗಿ ಆಸ್ಪತ್ರೆ ಸಂಬಂಧಿ ಕೊಲೆ ಘಟನೆಗೆ ಸಂಬಂಧಿಸಿದಂತೆ ಝಬಿ ಎಂಬಾತ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ರು. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವಿಜಯ್ ಎಂಬಾಂತನ ಕೊಲೆ ಘಟನೆಗೆ ಸಂಬಂಧಿಸಿದಂತೆ ಆರೋಪಿ ಝಬಿ ಮಾರಕಾಸ್ತ್ರಗಳನ್ನು ಹರ್ಷ ಫರ್ನ್ ಇನ್ ಬಳಿ ಬಚ್ಚಿಟ್ಟದ್ದನು,ಮಹಜಿರ್ ಗೆ ಕರೆದೊಯ್ಯುವ ಸಂದರ್ಭದಲ್ಲಿ ಜಯನಗರ ಠಾಣೆ ಸಿಬ್ಬಂದಿ ರೋಷನ್ ಅವರ ಮೇಲೆ ಝಬಿ ಹಲ್ಲೆಗೆ ಮುಂದಾಗಿದ್ದ. ಆಗ ಹರೀಶ್ ಪಾಟಿಲ್ ಝಬಿ ಕಾಲಿಗೆ ಗುಂಡು ಹಾರಿಸಿದ್ರು.
ನವಂಬರ್ 5 2022 ಅಸ್ಲಾಂ ಕಾಲಿಗೆ ಗುಂಡು.
ಬಿ.ಹೆಚ್ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಶೋಕ್ ಪ್ರಭು ಅಂಬುವನ ಮೇಲ ಕ್ಷುಲ್ಲಕ ಕಾರಣಕ್ಕೆ ಖ್ಯಾತೆ ತೆಗೆದು ಹರಿತವಾದ ವಸ್ತುವಿನಿಂದ ಕನ್ನೆ ಭಾಗಕ್ಕೆ ಇರಿಯಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಅಸ್ಲಾಂ ಪುರಲೇ ಸಮೀಪದ ಲೇಔಟ್ ಒಂದರಲ್ಲಿ ಅಡಗಿದ್ದ. ಆತನನ್ನು ಬಂಧಿಸಲು ಬಂದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ರಮೇಲೆ ಅವರ ಮೇಲೆ ಅಸ್ಲಾಂ ಚಾಕುನಿಂದ ದಾಳಿ ಮಾಡಿದ್ದ. ಆತ್ಮರಕ್ಷಣೆಗಾಗಿ ಪಿಎಸ್ಸೈ ವಸಂತ್ ಅಸ್ಲಾಂ ಕಾಲಿಗೆ ಗುಂಡು ಹಾರಿಸಿದ್ರು.
ಶಿವಮೊಗ್ಗ ಪೊಲೀಸರು ಖಡಕ್ ಆಗಿ ಕೆಲಸ ಮಾಡುತ್ತಿರುವುದಕ್ಕೆ ರಾಜಧಾನಿ ಶೈಲಿಯಲ್ಲಿ ಅವರು ಕೆಲಸ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ರೌಡಿ ಎಗರಿದರೆ ಕಾಲಿಗೆ ಗುಂಡೇಟು ಗ್ಯಾರಂಟಿ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ ರೌಡಿ ಕಾಲಿಗೆ ಗುಂಡು ಬಿದ್ದಾಗ ಪರ್ಯಾಯವಾಗಿ ಪೊಲೀಸ್ ಸಿಬ್ಬಂಧಿಗೂ ಹಲ್ಲೆಯಾಗೋದೆ ಒಂದು ವಿಪರ್ಯಾಸ.