ಬೆಂಗಳೂರು: ಮಂಗಳವಾರ ನಡೆದ ಎರಡನೇ ದಿನದ ಅಧಿವೇಶನದಲ್ಲಿ ಗ್ಯಾರಂಟಿ ಕದನ ತಾರಕಕ್ಕೆ ಹೋಗಿದೆ. ಸದನದ ಒಳಗೆ ಮಾತ್ರವಲ್ಲ.. ಸದನದ ಹೊರಗೂ ಆಡಳಿತ – ವಿಪಕ್ಷ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ರು. ಧಮ್ಮು ತಾಕತ್ತು ಎಲ್ಲಾ ಪ್ರದರ್ಶನವಾಯ್ತು.
ಯೆಸ್… ಎರಡನೇ ದಿನದ ಅಧಿವೇಶನ ಗ್ಯಾರಂಟಿ ಸಮರಕ್ಕೆ ಬಲಿಯಾಗಿದೆ. ಸದನದ ಹೊರಗೆ ವಿಪಕ್ಷ ನಾಯಕರು ಧರಣಿ ನಡೆಸಿದ್ರೆ, ಹೊರಗೆ ಮಾತಿನಂದಲೇ ಅಟ್ಯಾಕ್ ಮಾಡಿದ್ರು. ದಾಖಲೆ ಕೊಡೋ ಧಮ್ಮು, ತಾಕತ್ತು ನಮಗೆ ಇದೆ. ಸಚಿವರ ವಿರುದ್ಧ ಯಾವ ಕ್ರಮ ಕೈಗೊಳ್ತೀರಿ ಅಂತಾ ಮೊದಲು ಹೇಳಿ ಅಂತಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ರು. ಇದು ಹನಿಮೂರ್ ಪೀಡಿಯಡ್ ಸರ್ಕಾರ ಎಂದು ಕುಟುಕಿದ್ರು..
ಇನ್ನು ಹೆಚ್ ಡಿಕೆ ಹೇಳಿಕೆಗೆ ಬಿಜೆಪಿ ನಾಯಕರು ಕೂಡ ದನಿಗೂಡಿಸಿದ್ರು. ಗ್ಯಾರಂಟಿಗಳನ್ನ ಈಡೇರಿಸದೇ ಸಮಯ ದೂಡುತ್ತಿದ್ದಾರೆ. ತನಿಖೆ ತನಿಖೆ ಅಂತಾ ಗೊಡ್ಡು ಬೆದರಿಕೆ ಹಾಕ್ತಿದ್ದಾರೆ. ಅದಕ್ಕೆಲ್ಲಾ ಹೆದರಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿ ಕಾರಿದ್ರು..
ಬಿಜೆಪಿ ಹೋರಾಟಕ್ಕೆ ಡಿ. ಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ. ಯಡಿಯೂರಪ್ಪಗೆ ಒಳ್ಳೆಯದಾಗ್ಲಿ. ಜನ ರೆಸ್ಟ್ ಕೊಟ್ಟಿದ್ದಾರೆ. ರೆಸ್ಟ್ ಮಾಡಲಿ. ಗಾಬರಿ ಯಾಕೆ ಎಂದು ಡಿಕೆಶಿ ಟಾಂಗ್ ಕೊಟ್ರು. ಕುಮಾರಸ್ವಾಮಿ ಬಳಿ ದಾಖಲೆ ಇದ್ರೆ ಲೋಕಾಯುಕ್ತಕ್ಕೆ ಕೊಡಲಿ ಎಂದು ಸವಾಲ್ ಹಾಕಿದ್ರು..
ಇನ್ನು ಗ್ಯಾರಂಟಿಗಳ ಅನುಷ್ಠಾನದಿಂದ ಬಿಜೆಪಿಯವ್ರಿಗೆ ಸಹಿಸಿಕೊಳ್ಳಲು ಆಗ್ತಾ ಇಲ್ಲ.. ಅದಕ್ಕೆ ಪ್ರೊಟೆಸ್ಟ್ ಮಾಡ್ತಿದ್ದಾರೆ. ಎಸ್ ಐಟಿಯಿಂದ ಬಿಟ್ ಕಾಯಿನ್ ಹಗರಣ ತನಿಖೆ ಆಗ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ರು..
ಕುಮಾರಸ್ವಾಮಿಯವ್ರು ಹತಾಶರಾಗಿ ಮಾತಾಡ್ತಿದ್ದಾರೆ. ಯಾವುದಕ್ಕೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲ್ಲ.. ಅದೇನ್ ದಾಖಲೆ ಇದೆಯೋ ಬಿಡುಗಡೆ ಮಾಡಲಿ ಎಂದು ಸಚಿವ ಎಂ.ಬಿ ಪಾಟೀಲ್ ಹಾಗೂ ಶಾಸಕ ಶಿವಲಿಂಗೇಗೌಡ ಚಾಲೆಂಜ್ ಹಾಕಿದ್ರು..
ಬಿಜೆಪಿಯವ್ರು ಮೊದಲು ವಿಪಕ್ಷ ನಾಯಕನ್ನ ಆಯ್ಕೆ ಮಾಡಿಕೊಳ್ಳಲಿ. ಧಮ್ಮು, ತಾಕತ್ ಇದ್ರೆ ಗ್ಯಾರಂಟಿ ಸರಿಯಿಲ್ಲ ಅಂತಾ ಮಹಿಳೆಯರ ಬಳಿ ಹೋಗಿ ಕೇಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಕೆ.ಎನ್ ರಾಜಣ್ಣ ವಾಗ್ದಾಳಿ ನಡೆಸಿದ್ರು.
ಒಟ್ನಲ್ಲಿ ಇವತ್ತು ಇಡೀ ದಿನ ಪ್ರತಿಭಟನೆ, ವಾಕ್ಸಮರದಿಂದಲೇ ಅಧಿವೇಶನ ಮುಗಿದು ಹೋಯ್ತು.. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶವೇ ಸಿಗಲಿಲ್ಲ. ನಾಳೆಯೂ ಕೂಡ ಗ್ಯಾರಂಟಿ ಕದನ ಕೋಲಾಹಲವನ್ನೇ ಎಬ್ಬಿಸಲಿದೆ..