ಬಾಲಿವುಡ್ ನಟಿ ಶ್ರುತಿ ಹಾಸನ್ ಹಾಗೂ ಶಾಂತನು ಹಜಾರಿಕಾ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರು ಲೀವಿಂಗ್ ಟುಗೇದರ್ ನಲ್ಲಿದ್ದಾರೆ. ಇಬ್ಬರ ಪ್ರೀತಿಗೆ ಎರಡು ಮನೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ಮಧ್ಯೆ ಬಾಯ್ ಫ್ರೆಂಡ್ ಕುರಿತು ನಟಿ ಶ್ರುತಿ ಹಾಸನ್ ದೂರಿದ್ದಾರೆ. ಸದ್ಯ ನಟಿ ಶ್ರುತಿ ಹಾಸನ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಾಯ್ಫ್ರೆಂಡ್ ಬಗ್ಗೆ ಶ್ರುತಿ ಹಾಸನ್ ಕೆಲ ವಿಚಾರಗಳಲ್ಲಿ ದೂರಿದ್ದಾರೆ.
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್ ಗೆ ಹೇಳಿಕೊಳ್ಳುವಂತ ಬ್ರೇಕ್ ಸಿಕ್ಕಿಲ್ಲ. ಸಿನಿಮಾಗಳ ಜೊತೆಗೆ ಶ್ರುತಿ ಹಾಸನ್ ಬಾಯ್ಫ್ರೆಂಡ್ ವಿಚಾರಕ್ಕೂ ಆಗಾಗ ಸುದ್ದಿ ಆಗುತ್ತಾರೆ. ಈ ವಿಚಾರದಲ್ಲಿ ಅವರು ಯಾವುದೇ ಮುಚ್ಚುಮರೆ ಮಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶಾಂತನು ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ಶಾಂತನು ಅವರನ್ನು ‘ಮೋಸ್ಟ್ ಅನ್ರೊಮ್ಯಾಂಟಿಕ್’ ವ್ಯಕ್ತಿ ಎಂದು ಶ್ರುತಿ ಹಾಸನ್ ದೂರಿದ್ದಾರೆ.
ಶ್ರುತಿ ಹಾಸನ್ ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದಾರೆ. ‘ನೀನು ಮೋಸ್ಟ್ ಅನ್ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದಿದ್ದಾರೆ ಶ್ರುತಿ ಹಾಸನ್. ಈ ವಿಡಿಯೋ ವೈರಲ್ ಆಗಿದೆ.