ನವದೆಹಲಿ: ವಿಧಾನಸಭೆ ಅಧಿವೇಶನದ ಹೊರತಾಗಿಯೂ ಕರ್ನಾಟಕದಲ್ಲಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಘೋಷಿಸದಿರುವ ಬಗ್ಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಗೆದ್ದಾಗ ಬಿಜೆಪಿ ಅಬ್ಬರ ಜೋರಾಗುತ್ತದೆ ಆದರೆ, ‘ಸೋತಾಗ ಕುಸಿಯುತ್ತದೆ ಮತ್ತು ಅರಚುತ್ತದೆ’ ಎಂದು ಹೇಳಿದೆ. ರಾಜ್ಯ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಇನ್ನೂ ವಿಧಾನಸಭೆಯಲ್ಲಿ ತನ್ನ ನಾಯಕನನ್ನು ಆಯ್ಕೆ ಮಾಡಿಲ್ಲ. ಹೈಕಮಾಂಡ್ ನಾಯಕರು ತೂಗಿ ಅಳೆದು ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ತೊಡಗಿದ್ದಾರೆ.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಕೇಂದ್ರದ ವೀಕ್ಷಕರಾಗಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೇಮಕ ಮಾಡಿದ್ದಾರೆ. ಬೆಂಗಳೂರಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವ ಬಿಜೆಪಿಯಲ್ಲಿ ಇದು ಗುಂಪುಗಾರಿಕೆಯನ್ನು ತೋರಿಸುತ್ತದೆ ಮತ್ತು ಅದನ್ನು ‘ಅತ್ಯಂತ ಅಶಿಸ್ತಿನ’ ರಾಜಕೀಯ ಪಕ್ಷ ಎಂದು ಕರೆದರು.