ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಗಂಟಲು ನೋವು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಯಾರಿಗೆ ಗಂಟಲು ನೋವು ಹೆಚ್ಚಾಗಿರುತ್ತದೆ ಅವರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ.
ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಹಲವಾರು ಮನೆಮದ್ದುಗಳು ಪರಿಹಾರದ ರೂಪದಲ್ಲಿ ಕೆಲಸ ಮಾಡುತ್ತವೆ.
ಚಳಿಗಾಲದಲ್ಲಿ ಗಂಟಲು ನೋವು ಬರಲು ಕಾರಣಗಳು
- ಮೊದಲಿಗೆ ಗಂಟಲು ನೋವು ಅಥವಾ ಚಳಿಗಾಲದಲ್ಲಿ ಗಂಟಲಿನ ಭಾಗದಲ್ಲಿ ಏಕೆ ನೋವು ಕಾಣಿಸಿ ಕೊಳ್ಳುತ್ತದೆ ಎಂದು ನೋಡುವುದಾದರೆ, ಇದೊಂದು ವೈರಲ್ ಸೋಂಕಿನ ಪ್ರಭಾವವಾಗಿದ್ದು, ಶೀತ ಹಾಗೂ ಜ್ವರದ ಸಂದರ್ಭದಲ್ಲಿ ಗಂಟಲಿನ ಭಾಗಕ್ಕೆ ತೊಂದರೆದಾಯಕವಾಗಿರುತ್ತದೆ.
- ಆದರೆ ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಮಾತ್ರ ಗಂಟಲು ನೋವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಗಂಟಲಿನ ಭಾಗದಲ್ಲಿ ವೈರಸ್ ಸಂತತಿ ಹೆಚ್ಚಾಗಿ ಉರಿಯೂತ ಕಂಡುಬರುತ್ತದೆ. ವಿಶೇಷವಾಗಿ ಟಾನ್ಸಿಲ್ ಭಾಗದಲ್ಲಿ ಈ ರೀತಿ ಆಗುತ್ತದೆ ಎಂದು ಹೇಳಲಾಗಿದೆ.
- ಆದರೆ ಮೊದಲೇ ಹೇಳಿದಂತೆ ಇದಕ್ಕೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ತಾನಾಗಿಯೇ ಸ್ವಲ್ಪ ನಿಧಾನವಾಗಿಯಾದರೂ ಕೂಡ ಸಮಯ ಕಳೆದಂತೆ ಪರಿಹಾರವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಇಲ್ಲಿ ಕೆಲವೊಂದು ಮನೆಮದ್ದುಗಳು ತಯಾರಿವೆ. ಅವುಗಳ ಬಗ್ಗೆ ತಿಳಿದುಕೊಳ್ಳಿ.
ಬಿಸಿ ಬಿಸಿ ಶುಂಠಿ ಚಹಾ ಕುಡಿಯಿರಿ
ಚಳಿಗಾಲ ಬಂತೆಂದರೆ ಹಲವರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ನೆಗಡಿ, ಕೆಮ್ಮು, ಜೊತೆಗೆ ಗಂಟಲು ನೋವು….ಚಳಿಗಾಲದಲ್ಲಿ ಹೇಳದೇ ಕೇಳದೇ ಬರುವ ಈ ಆರೋಗ್ಯ ಸಮಸ್ಯೆಗಳು, ಸಿಕ್ಕಾಪಟ್ಟೆ ಟೆನ್ಷನ್ ಮಾಡಿ ಬಿಡುತ್ತದೆ…
ಆದರೆ ಇಂತಹ ಸಮಯದಲ್ಲಿ ಶುಂಠಿ ಚಹಾ ಬೇರೆಲ್ಲಾ ಔಷಧಿಗಳಿಗಿಂತ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಸುತ್ತಲಿನ ಪ್ರಕೃತಿಯ ವ್ಯತ್ಯಾಸದಿಂದ ಉಂಟಾದ ಇಂತಹ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಣೆ ಮಾಡುವ ಶಕ್ತಿ ಶುಂಠಿ ಚಹಾಕ್ಕೆ ಇದೆ. ಅದರಲ್ಲೂ ಗಂಟಲು ನೋವಿನ ಸಮಸ್ಯೆಗೆ ಬಿಸಿ ಬಿಸಿ ಶುಂಠಿ ಚಹಾ ಬೆಸ್ಟ್ ಮನೆಮದ್ದು
ಶುಂಠಿ ಚಹಾವನ್ನು ತಯಾರು ಮಾಡುವುದು ಹೇಗೆ?
ಶುಂಠಿ ಟೀ ಸಿದ್ಧ ಮಾಡಲು ಬೇಕಾಗಿರುವ ಸಾಮಗ್ರಿಗಳು
- ಒಂದು ಅಥವಾ ಎರಡು ಕಪ್ಪು ನೀರು.
- ತೆಳ್ಳಗೆ ಹೆಚ್ಚಿದ ಶುಂಠಿಯ ಸಣ್ಣ ಚೂರುಗಳು.
- ಸ್ವಲ್ಪ ನಿಂಬೆ ಹಣ್ಣಿನ ರಸ ಅಥವಾ ಒಂದು ಚಮಚ ಜೇನು ತುಪ್ಪ.
ಶುಂಠಿ ಚಹಾ ತಯಾರು ಮಾಡುವ ವಿಧಾನ
- ಮೊದಲಿಗೆ ಸ್ಟೌವ್ ಮೇಲೆ ನೀರು ಕಾಯಲು ಇಡಿ.
- ನೀರು ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ನೀವು ಮೊದಲೇ ಕತ್ತರಿಸಿ ಇಟ್ಟುಕೊಂಡ ಶುಂಠಿ ಚೂರುಗಳನ್ನು ಹಾಕಿ ಸುಮಾರು 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಇದರಿಂದ ಶುಂಠಿಯಲ್ಲಿರುವ ರಸ ನೀರಿಗೆ ಬಿಟ್ಟುಕೊಳ್ಳುತ್ತದೆ.
- ಈಗ ಸ್ಟವ್ ಆಫ್ ಮಾಡಿ ಶುಂಠಿ ರಸದ ನೀರನ್ನು ನೀವು ಕುಡಿಯುವ ಮಟ್ಟಿಗೆ ಅಂದರೆ ಉಗುರು ಬೆಚ್ಚನೆಯ ರೀತಿ ಆರಲು ಬಿಡಿ.
- ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಅಥವಾ ಜೇನು ತುಪ್ಪವನ್ನು ಹಾಕಿ.
- ಇದರ ರುಚಿ ಇನ್ನೂ ಸ್ವಲ್ಪ ಹೆಚ್ಚಿಸಬೇಕೆಂದರೆ ನೀವು ಇದಕ್ಕೆ ಸ್ವಲ್ಪ ಪುದೀನ ಎಲೆಗಳನ್ನು ಬೇಕಾದರೂ ಸೇರಿಸಬಹುದು.