ಬೆಂಗಳೂರು: ಪದವೀಧರ ಶಾಲಾ ಶಿಕ್ಷಕರ ನೇಮಕಾತಿ ಆದೇಶ ಪತ್ರ ನೀಡದ ವಿಚಾರವಾಗಿ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಿವೈ ವಿಜಯೇಂದ್ರ, ಮಹೇಶ್ ತೆಂಗಿನಕಾಯಿ ಅವರು ಪ್ರಸ್ತಾಪ ಮಾಡಿದರು.
ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನಿನಲ್ಲಿ ಒಂದೇ ಒಂದು ತೊಡಕಿದೆ. ಪತಿಯ ಆದಾಯ ಯಾರದ್ದು ತೆಗೆದುಕೊಳ್ಳಬೇಕು ಎಂಬ ತೊಡಕಿದೆ. ಸದ್ಯ ಅದು ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತನಾಡಲ್ಲ.
ಯಾವುದಕ್ಕೂ ಆದೇಶ ಕೊಡಬೇಡಿ, ಪ್ರಕ್ರಿಯೆ ನಿಲ್ಲಿಸಬೇಡಿ ಅಂತಾ ನ್ಯಾಯಾಲಯ ಹೇಳಿದೆ. ಕೋರ್ಟ್ ಆದೇಶ ಮಾಡಿದರೆ ಕಣ್ಣುಮುಚ್ಚಿ ನೇಮಕಾತಿ ಪತ್ರ ನೀಡುತ್ತೇವೆ. ಜುಲೈ 17ರೊಳಗೆ ಕೋರ್ಟ್ ಆದೇಶ ಪಡೆದು ತೀರ್ಮಾನಿಸುತ್ತೇವೆ ಎಂದರು.