ಬೆಂಗಳೂರು: ರಾಜ್ಯ ಸರ್ಕಾರವು ವಾಹನ ಸವಾರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದು, ಸಂಚಾರಿ ದಂಡ ಪಾವತಿಗೆ ಶೇ 50ರಷ್ಟು ರಿಯಾಯಿತಿ ನೀಡಿದೆ.
ಸಂಚಾರಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗಿದ್ದು, ಸೆಪ್ಟೆಂಬರ್ 9ರವರೆಗೂ ದಂಡ ಪಾವತಿಗೆ ಅವಕಾಶವಿರಲಿದೆ.
ಆದರೆ, ಕೇವಲ ಫೆಬ್ರವರಿ 11ಕ್ಕೂ ಮೊದಲು ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರವೇ ಈ ರಿಯಾಯತಿ ಅವಕಾಶ ಅನ್ವಯವಾಗಲಿದೆ. ಇಂದಿನಿಂದ ದಂಡ ಪಾವತಿಸಲು ಅವಕಾಶ ಆರಂಭವಾಗಲಿದೆ ಎಂಬುದರ ಕುರಿತು ಸಂಚಾರಿ ಪೊಲೀಸ್ ಇಲಾಖೆಯಿಂದ ಮಾಹಿತಿ ಲಭ್ಯವಾಗಬೇಕಿದೆ. ಆ ಬಳಿಕ ವಾಹನ ಸವಾರರು ಸಂಚಾರಿ ಪೊಲೀಸ್ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ, ಬೆಂಗಳೂರು ಸಂಚಾರಿ ಪೊಲೀಸ್ ವೆಬ್ಸೈಟ್ ಮೂಲಕ ವಾಹನ ಸವಾರರು ದಂಡ ಪಾವತಿಸಬಹುದಾಗಿದೆ.
ಸಂಚಾರಿ ದಂಡ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ಜಾರಿಗೆ ತರುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.