ಬೆಂಗಳೂರು: ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ಕುರಿತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಯತೀಂದ್ರ ಭಾಗಿ ಎಂದು ಆರೋಪ ಮಾಡಿದ್ದರು ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಅವರು ನಮ್ಮ ಮನೆಯಲ್ಲಿ ಇದ್ದಾರೆ ಅಂತ ಆರೋಪ ಮಾಡೋದು ಸರಿಯಲ್ಲ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ YST ಟ್ಯಾಕ್ಸ್ ಜಾರಿಗೆ ಬಂದಿದೆ ಎಂಬ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಎಂಎಲ್ಎ ಆಗಿರಲಿಲ್ವಾ? ಯತೀಂದ್ರ ನಮ್ಮ ಮನೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಅವರ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಮನೆಯಲ್ಲೂ ಅವರ ಮಗ ಇದ್ದರು ಅಲ್ಲವೇ? ಅದನ್ನ ಏನು ಅಂತ ಕರೆಯೋದು? ಅವರ ಹೆಂಡತಿ MLA ಆಗಿದ್ರು. ಅವರ ಅಣ್ಣ ಮಂತ್ರಿ ಆಗಿದ್ರು, ಅವರ ತಂದೆ ಪ್ರಧಾನಿ ಆಗಿದ್ರು. ಅವರ ಅಣ್ಣನ ಮಕ್ಕಳು ಎಂಎಲ್ಎ ಆಗಿದ್ರು. ಅವರಿಗೆ ಏನಂತ ಕರಿಯಬೇಕು? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.