ಮಂಡ್ಯ: ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತದೆ. ಕೆಎಸ್ಆರ್ಟಿಸಿ ಚಾಲಕ (KSRTC Driver) ಆತ್ಮಹತ್ಯೆಗೆ ಪ್ರಯತ್ನಿಸಿರುವ (Suicide Attempt) ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ಪ್ರಯಿಕ್ರಿಯೆ ನೀಡಿದ್ದಾರೆ.
ಮಂಡ್ಯ (Mandya) ಜಿಲ್ಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚಲುವರಾಯಸ್ವಾಮಿ, ಕೆಲವರು ಅನಾವಶ್ಯಕವಾಗಿ ಈ ರೀತಿ ರಾಜಕೀಯ ಮಾಡುವುದು ಪರಿಪಾಟಲು. ವರ್ಗಾವಣೆ ಸಹಜ ಪ್ರಕ್ರಿಯೆ. ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತೆ. ಹಿಂದೆಯೂ ಸಾಕಷ್ಟು ವರ್ಗಾವಣೆ ಆಗಿದೆ. ಹಾಗಂತ ಜೆಡಿಎಸ್ನವರೆಲ್ಲರನ್ನೂ ವರ್ಗಾವಣೆ ಮಾಡೋಕಾಗುತ್ತಾ ಎಂದು ಪ್ರಶ್ನಿಸಿದರು. ನಾನು ಆ ಚಾಲಕನ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ. ವರ್ಗಾವಣೆ ಮಾಡಿ ಎಂದು ನಾನು ಹೇಳಿಲ್ಲ.
ಆದರೆ ವರ್ಗಾವಣೆ ಆಗಿದೆ. ಆ ಚಾಲಕನ ಬಾವ ನನಗೆ ಫೋನ್ ಮಾಡಿದ್ರು. ಹೀಗಾಗಿ ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ. ಏನಾದ್ರೂ ತಪ್ಪಿದ್ರೆ ತನಿಖೆ ಮಾಡಿ ಆಮೇಲೆ ವರ್ಗಾವಣೆ ಮಾಡಿ ಎಂದು ಹೇಳಿದ್ದೆ. ಅದನ್ನು ಕ್ಯಾನ್ಸಲ್ ಮಾಡಿ ಅಂತ ಇವರು ನಿನ್ನೆ ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಮಂತ್ರಿ ಮಂಡಲದಿಂದ ಚಲುವರಾಯಸ್ವಾಮಿ ವಜಾ ಮಾಡುವಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೈ ಮುಗಿದು, ಕುಮಾರಸ್ವಾಮಿ ಅವರು ಏನಾದ್ರೂ ಹೇಳಲಿ, ಅವರಿಗೆ ಒಳ್ಳೆದಾಗಲಿ. ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.