ಗದಗ: ಪರಿಹಾರಕ್ಕಾಗಿ ಒತ್ತಾಯಿಸಿ ಗದಗ ತಾಲೂಕಿನ ನಾಗಾವಿ ಸೇರಿದಂತೆ ಜಿಲ್ಲೆಯ ಗ್ರಾಮಸ್ಥರಿಂದ ಧರಣಿ ನಡೆಸಲಾಯಿತು. ಗದಗ ಜಿಲ್ಲಾಡಳಿತ ಭವನದ ಎದುರಿಗೆ ಪೆಂಡಾಲ್ ಹಾಕಿ ಆಕ್ರೋಶ ವ್ಯಕ್ತಪಡಿದರು. ಉತ್ತರ ಕರ್ನಾಟಕ ಮಹಾಸಭಾ ಹಾಗೂ ಅರಣ್ಯ ಹಕ್ಕು ಹೋರಾಟ ಸಮಿತಿ ಮತ್ತು ಬಗರ್ ಹುಕುಂ ಸಮಿತಿ ನೇತೃತ್ವದಲ್ಲಿ ಧರಣಿ ಮಾಡಲಾಗಿದ್ದು, ರೈತರಿಗೆ ಪರಿಹಾರ ನೀಡದೇ ಒಕ್ಕಲೆಬ್ಬಿಸಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಿಸಿದ್ದಾರೆ ಅನ್ನೋದು ರೈತರ ಆರೋಪವಾಗಿದೆ.
ಸುಮಾರು ಮೂರ್ನಾಲ್ಕು ತಲೆಮಾರುಗಳಿಂದ ಅನೇಕ ರೈತ ಕುಟುಂಬಗಳಿಂದ ಭೂಮಿ ಉಳುಮೆ ಮಾಡಲು ಹಕ್ಕುಪತ್ರ ನೀಡಲು ಮನವಿ ಮಾಡಿದ್ದೇವೆ. ಆದ್ರೆ ಜಿಲ್ಲಾಡಳಿತ ಕ್ಯಾರೆ ಅಂದಿಲ್ಲ. ನಮ್ಮ ಉಳುಮೆ ಮಾಡುವ ಭೂಮಿಯಲ್ಲಿ ಆರ್ ಡಿ ಪಿ ಆರ್ ವಿವಿ ಸ್ಥಾಪನೆ ಆಗಿದೆ. ಅದಕ್ಕೆ ನಮಗೆ ಪರಿಹಾರ ಮಾತ್ರ ನೀಡಿಲ್ಲ ಎಂದು ಪರಿಹಾರ ಸಿಗೋವರೆಗೂ ಗದಗ ಜಿಲ್ಲಾಡಳಿತ ಭವನದ ಮುಂದೆಯೇ ಅಡುಗೆ ಮಾಡಿ ಧರಣಿಗೆ ಮುಂದಾಗಿರೋ ರೈತರು.